Site icon PowerTV

ಧರ್ಮಸ್ಥಳ ಮಂಜುನಾಥ ಸ್ವಾಮಿ ಆಣೆ ಹಾಕಿ ನಟ ಯಶ್ ಹೇಳಿದ್ದೇನು?

ಮಂಡ್ಯ : ತಮ್ಮ ಪಕ್ಷವನ್ನು ಯಶ್ ಕಳ್ಳರ ಪಕ್ಷ ಎಂದು ಹೇಳಿದ್ದಾರೆ ಅಂತ ರಾಕಿಂಗ್ ಸ್ಟಾರ್ ಯಶ್ ವಿರುದ್ಧ ಕಿಡಿಕಾರಿದ್ದ ಸಿಎಂ ಕುಮಾರಸ್ವಾಮಿ ಅವರಿಗೆ ಯಶ್ ಮತ್ತೊಮ್ಮೆ ಬಹಿರಂಗವಾಗಿ ತಿರುಗೇಟು ನೀಡಿದ್ದಾರೆ.
ಮಂಡ್ಯದಲ್ಲಿ ಸುಮಲತಾ ಅವರ ‘ಸ್ವಾಭಿಮಾನಿ ಸಮ್ಮಿಲನ’ ಹೆಸರಿನ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಅವರು, ತನ್ನ ಬಗ್ಗೆ ಸುಮ್ಮನೇ ಸುಳ್ಳು ಹೇಳೋದು ಸರಿಯಲ್ಲ. ನಾನು ಧರ್ಮಸ್ಥಳ ಮಂಜುನಾಥ ಸ್ವಾಮಿ ಆಣೆ ಹಾಕಿ ಹೇಳ್ತೀನಿ. ನಾನು ಅಂಥಾ ಮಾತು ಹೇಳಿಲ್ಲ. ನಾನು ಹಾಗೆ ಹೇಳಿದ್ದು ನಿಜ ಎಂದಾದರೆ ಸಿನಿಮಾ ಬಿಟ್ಟೋಗ್ತೀನಿ, ಮಂಡ್ಯ ಮಾತ್ರವಲ್ಲ, ಕರ್ನಾಟಕನೇ ಬಿಟ್ಟು ಹೋಗ್ತೀನಿ. ಬಿಟ್ಟು ಹೋಗ್ತೀನಿ ಅಂತ ಹೇಳಿ ಹೋಗದೇ ಇರೋನಲ್ರಪ್ಪಾ ಸರಿಯಾಗಿ ಕೇಳಿಸಿಕೊಳ್ಳಿ ಅಂತ ಟಾಂಗ್ ಕೊಟ್ಟರು.

Exit mobile version