Site icon PowerTV

ಮೋದಿ ಗನ್​​ ತಗೊಂಡು ಹೋಗಿದ್ರಾ? : ಸಿದ್ದರಾಮಯ್ಯ

ಚಾಮರಾಜನಗರ : ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಮಾಜಿ ಸಿಎಂ, ಸಿಎಲ್​ಪಿ ನಾಯಕ ಸಿದ್ದರಮಾಯ್ಯ ಮತ್ತೊಮ್ಮೆ ಕೆಂಡಮಂಡಲರಾಗಿದ್ದಾರೆ.
ಯುಪಿಎ ಅವಧಿಯಲ್ಲಿ ಉಗ್ರರ ದಾಳಿ ಹೆಚ್ಚಿತ್ತು ಅನ್ನೋ ಮೋದಿ ಹೇಳಿಕೆಗೆ ಸಿದ್ದರಾಮಯ್ಯ ಗರ ಆಗಿದ್ದಾರೆ. ಚಾಮರಾಜನಗರದಲ್ಲಿ ಮಾತನಾಡಿದ ಅವರು, ಗಡಿಯಲ್ಲಿ ಸೈನಿಕರು ಯುದ್ಧ ಮಾಡೋದು, ಪ್ರಧಾನಿ ಮೋದಿ ಗನ್ ತಗೊಂಡು ಹೋಗಿದ್ರಾ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಈ ಹಿಂದೆ ನಡೆದ ಯುದ್ಧಗಳಲ್ಲಿ ಮೋದಿ ಇದ್ರಾ ಎಂದು ಕೇಳಿದ್ದಾರೆ.
ಮೋದಿ ಒಳ್ಳೆಯ ಕೆಲಸ ಮಾಡಿದ್ದಾರೆ ಅಂತ ಹೇಳಿದ್ದಾರೆ. ಮೋದಿ ಏನೇನು ಒಳ್ಳೆಯ ಕೆಲಸ ಮಾಡಿದ್ದಾರೆ ಅಂತ ಯಡಿಯೂರಪ್ಪ ಪಟ್ಟಿ ಕೊಟ್ಟಿದ್ದಾರಾ? ಒಳ್ಳೆಯ ಕೆಲಸ ಮಾಡಿದ್ದಾರೆ ಅಂದ್ರೆ, ಏನ್ ಮಾಡಿದ್ದಾರೆ ಅಂತ ಬೇಕಲ್ವಾ? ಎಂದರು.
ಬಿಜೆಪಿ ಎಂಪಿಗಳು ಏನೂ ಕೆಲಸ ಮಾಡಿಲ್ಲ. ಅದಕ್ಕೆ ಅವರು ಮೋದಿ ಹೆಸರಲ್ಲಿ ಮತ ಕೇಳ್ತಿದ್ದಾರೆ. ಮೋದಿ ಮಾಡಿರೋ ಒಳ್ಳೆಯ ಕೆಲಸಗಳೇನು? ಅವರು ಎರಡು ಕೋಟಿ ಉದ್ಯೋಗ ನೀಡಿದ್ರಾ? ಕಪ್ಪು ಹಣ ಭಾರತಕ್ಕೆ ವಾಪಸ್ ತಂದ್ರಾ ಎಂದು ವಾಗ್ದಾಳಿ ನಡೆಸಿದರು.

Exit mobile version