Site icon PowerTV

ಸುಮಲತಾಗೆ ವೋಟ್ ಮಾಡೋದು ಹೇಗೆ ಅಂತ ತಾತನಿಗೆ ಮೊಮ್ಮಗನಿಂದ ಪಾಠ..!

ಮಂಡ್ಯ : ಲೋಕಸಭಾ ಚುನಾವಣಾ ಅಖಾಡ ದಿನದಿಂದ ದಿನಕ್ಕೆ ರಂಗೇರುತ್ತಿದೆ. ರಾಜ್ಯದಲ್ಲಿ ಮೊದಲ ಹಂತದ ಮತದಾನ ನಡೆಯುವ ಕ್ಷೇತ್ರಗಳಲ್ಲಿ ಬಹಿರಂಗ ಪ್ರಚಾರಕ್ಕೆ ಇಂದು ತೆರೆ ಬೀಳಲಿದೆ.
ಇನ್ನು ಎಲ್ಲರಿಗೂ ಗೊತ್ತೇ ಇದೆ, ಸ್ಟಾರ್​​ವಾರ್​​ಗೆ ಸಾಕ್ಷಿಯಾಗಿರುವ ಮಂಡ್ಯ ಇಡೀ ದೇಶದ ಗಮನ ಸೆಳೆದಿರುವ ಕ್ಷೇತ್ರ. ಮೈತ್ರಿ ಅಭ್ಯರ್ಥಿ ನಿಖಿಲ್​ ಕುಮಾರಸ್ವಾಮಿ ಮತ್ತು ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರ ನಡುವಿನ ನೇರ ಹಣಾಹಣಿಗೆ ಮಂಡ್ಯ ಸಾಕ್ಷಿಯಾಗಿದೆ.
ಸುಮಲತಾ ಅವರಿಗೆ ಭಾರೀ ಬೆಂಬಲ ವ್ಯಕ್ತವಾಗುತ್ತಿದೆ. ಅವರಿಗೆ ಚಿಣ್ಣರ ಸಪೋರ್ಟ್ ಕೂಡ ಸಿಕ್ಕಿದೆ. ಅವರಿಗೆ ವೋಟ್​ ಮಾಡುವಂತೆ ಪುಟ್ಟ ಬಾಲಕನೊಬ್ಬ ಅವನ ತಾತನಿಗೆ ಪಾಠ ಮಾಡುತ್ತಿರುವ ವಿಡಿಯೋ ಒಂದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಬಾಲಕ ತನ್ನ ತಾತನಿಗೆ ಮತದಾನದ ಪಾಠವನ್ನು ಮಾಡಿದ್ದಾನೆ. ಕ್ರಮಸಂಖ್ಯೆ ಬಗ್ಗೆ ತಿಳಿಸಿಕೊಟ್ಟಿದ್ದಾನೆ. ಇವಿಎಂನಲ್ಲಿ ಹೇಗೆ ಮತ ಹಾಕಬೇಕು ಅನ್ನೋದನ್ನು ಹೇಳಿಕೊಟ್ಟಿರುವುದಲ್ಲದೆ ಸುಮಲತಾ ಅವರ ಕ್ರಮಸಂಖ್ಯೆ 20 ಅನ್ನೋದು ತಿಳಿಸಿಕೊಟ್ಟಿದ್ದಾನೆ.

Exit mobile version