Site icon PowerTV

ಕಾರ್ಯಕರ್ತರು ಸುಮ್ನೆ ಇದ್ದಾರೆ ಅಂದ್ರೆ ಏನ್​ ಅರ್ಥ? : ಸಿಎಂಗೆ ಯಶ್ ತಿರುಗೇಟು

ಮಂಡ್ಯ : ಯಾವನೋ ಯಶ್ ಅಂತೆ, ನಮ್ಮಂಥಾ ನಿರ್ಮಾಪಕರಿದ್ರೆ ಇವೆಲ್ಲಾ ಬದುಕ್ತಾವೆ. ನಂಗೆ ತೊಂದ್ರೆ ಆಗ್ಬಾರ್ದು ಅಂತ ಕಾರ್ಯಕರ್ತರು ಸುಮ್ನೆ ಇದ್ದಾರೆ ಎಂದು ಕಿಡಿಕಾರಿರುವ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರಿಗೆ ರಾಕಿಂಗ್ ಸ್ಟಾರ್ ಯಶ್ ತಿರುಗೇಟು ನೀಡಿದ್ದಾರೆ.
”ಇದು ಮಂಡ್ಯ, ಇದು ಯಾರ ಸ್ವತ್ತು ಅಲ್ಲ. ಜನರು ಯಾರದ್ದು ಸರಿ, ತಪ್ಪು ಅಂತ ನೋಡ್ತಿದ್ತಾರೆ. ಸಿನಿಮಾದವರು ಅಂತ ಹಗುರವಾಗಿ ಮಾತಾಡ್ತಿದ್ರು. ಇದು ರೌಡಿ ರಾಜ್ಯ ಅಲ್ಲ, ಇದು ಪ್ರಜಾಪ್ರಭುತ್ವ. ಪ್ರಜಾಪ್ರಭುತ್ವ ರಾಜ್ಯದಲ್ಲಿ ಎಲ್ಲರಿಗೂ ಸ್ವತಂತ್ರ ಇದೆ. ಕಾರ್ಯಕರ್ತರು ಸುಮ್ಮನಿದ್ದಾರೆ ಅಂದ್ರೆ ಏನ್ ಅರ್ಥ. ಆರುವರೆ ಕೋಟಿ ಜನ ಆಯ್ಕೆ ಮಾಡಿರೋ ಸಿಎಂ ಅವರು. ಸುಮಲತಾ ಪರವಾಗಿ ನಾವು ಪ್ರಚಾರ ಮಾಡಬಾರದಾ”? ಅಂತ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
”ಕಳ್ರು ಪಕ್ಷ ಅಂತ ನಾನ್ ಹೇಳಿದ್ದೀನಂತಾ? ಯಾರಾದ್ರು ಒಬ್ರು ಅದನ್ನು ತೋರಿಸಿ ಬಿಟ್ರೆ ನಾನು ಅವರು ಹೇಳಿದಂತೆ ಕೇಳ್ತೀನಿ. ಅವರ ಪಕ್ಷದಲ್ಲೂ ನಂಗೆ ಸ್ನೇಹಿತರಿದ್ದಾರೆ. ಲಾಸ್ಟ್​ ಟೈಮ್ ಅವರ ಪಕ್ಷದಲ್ಲೂ ಕರೆದಿದ್ರು. ಪ್ರಚಾರಕ್ಕೆ ಹೋಗಿದ್ದೆ. ಅಂಥಾ ಭಾವನೆ ಇದ್ದಿದ್ರೆ ಹೋಗ್ತಾ ಇದ್ನಾ? ಸುಮ್ನೆ ಅವ್ರವರೇ ಹುಟ್ಟಿಸಿಕೊಂಡ ಮಾತಾಡ್ಬಾರ್ದು. ಮುಖ್ಯಮಂತ್ರಿಗಳು ಬ್ಯುಸಿ ಇದ್ದಾರೆ. ಅಕ್ಕ-ಪಕ್ಕದವರು ಯಾರೋ ತಪ್ಪು ಮಾಹಿತಿ ನೀಡಿರಬೇಕು. ಅವರು ಬಿಡುವು ಆದಮೇಲೆ ಕ್ಲಾರಿಟಿ ಸಿಕ್ಕ ಮೇಲೆ ಮಾತಾಡ್ಲಿ. ಯಾಕಂದ್ರೆ ನಾವು ಅಂಥಾ ಮಾತು ಆಡೇ ಇಲ್ಲ. ಸುಮ್​ ಸುಮ್ನೆ ಹೇಳ್ದೇ ಇರೋದನ್ನು ಒಪ್ಕೊಳಲ್ಲ” ಎಂದರು.

Exit mobile version