Site icon PowerTV

ದೇವೇಗೌಡ್ರನ್ನು ಒದ್ದು ಆಚೆಗೆ ಹಾಕಿದ್ರಂತೆ ಕುಮಾರಸ್ವಾಮಿ..!

ತುಮಕೂರು : ಮಾಜಿ ಪ್ರಧಾನಿ ಹೆಚ್​.ಡಿ ದೇವೇಗೌಡರನ್ನು ಸ್ವತಃ ಅವರ ಪುತ್ರ, ಸಿಎಂ ಹೆಚ್​.ಡಿ ಕುಮಾರಸ್ವಾಮಿ ಅವರೇ ಮನೆಯಿಂದ ಆಚೆ ಹಾಕಿದ್ದರಂತೆ..! ಇಂಥಾ ಒಂದು ಗಂಭೀರ ಆರೋಪವನ್ನು ಮಾಡಿದ್ದಾರೆ ಚಿಕ್ಕನಾಯಕನಹಳ್ಳಿ ಬಿಜೆಪಿ ಶಾಸಕ ಜೆ.ಸಿ ಮಾಧುಸ್ವಾಮಿ..!
ಪ್ರಚಾರ ಸಭೆಯಲ್ಲಿ ಮಾಧುಸ್ವಾಮಿ ನೀಡಿದ್ದ ಹೇಳಿಕೆ ಈಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

”ದೇವೇಗೌಡರನ್ನು ಕುಮಾರಸ್ವಾಮಿ ಒದ್ದು ಆಚೆಗೆ ಹಾಕಿದ್ರು. ದೇವೇಗೌಡ್ರು ಪ್ರತ್ಯೇಕವಾಗಿ ಕುಮಾರಪಾರ್ಕ್​ ಕ್ವಾಟ್ರಸ್​ನಲ್ಲಿ ವಾಸವಿದ್ರು. ಆಗ ನಾವು ಅವರಿಗೆ ಊಟ ತೆಗೆದುಕೊಂಡು ಹೋಗ್ತಿದ್ವಿ” ಎಂದು ಆರೋಪಿಸಿದ್ದಾರೆ.
”ಈಗ ಕುಮಾರಸ್ವಾಮಿ ನನ್ನ ಬಳಿ ಬರಲಿ, ಯಾಕಪ್ಪ ಅವತ್ತು ನಿಮ್ಮಪ್ಪನನ್ನು ಹೊರಹಾಕಿದ್ದೆ ಅಂತ ಹೇಳ್ತೀನಿ” ಅಂದಿದ್ದಾರೆ ಮಾಧುಸ್ವಾಮಿ.

ವಿಡಿಯೋ ನೋಡಿ 

Exit mobile version