Site icon PowerTV

ಕಡೆಯ ಎರಡು ದಿನ ಹುಷಾರಾಗಿರಿ – ಮತದಾರರಿಗೆ ಯಶ್ ಸೂಚನೆ

ಮಂಡ್ಯ: ನಾವೆಲ್ಲರೂ ಕೂಡ ಹುಷಾರಾಗಿರಬೇಕು. ಕಡೆಯ ಎರಡು ದಿನ ಇನಷ್ಟು ಹುಷಾರಾಗಿರಿ ಅಂತ ಯಶ್ ಹೇಳಿದ್ರು. ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನ ಐಕನಹಳ್ಳಿಯಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಪರ ಪ್ರಚಾರ ನಡೆಸಿದ ಯಶ್, “ಯಾರ ಬೆದರಿಕೆಗೂ ಬಗ್ಗದೆ ಸುಮಲತಾ ಅವರು ಕೆಲಸ ಮಾಡುತ್ತಾರೆ. ಸುಮಲತಾ ಅವರಿಗೆ ಒಂದು ಅವಕಾಶ ಕೊಡಿ” ಎಂದು ಹೇಳಿದ್ದಾರೆ. ಆಡಿಯೋ ನೀವೆಲ್ಲರೂ ಕೇಳಿದ್ದೀರಲ್ವಾ ಅಂತ ಯಶ್ ಜನರನ್ನು ಪ್ರಶ್ನಿಸಿದಾಗ ‘150ಕೋಟಿ ರೂ’ ಕೇಳಿದ್ದೀವಿ” ಎಂದು ಗ್ರಾಮಸ್ಥರು ಉತ್ತರಿಸಿದ್ದಾರೆ.

ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಸ್ಟಾರ್​ವಾರ್​ ಮುಂದುವರಿದಿದ್ದು ಚಾಲೆಂಜಿಂಗ್ ಸ್ಟಾರ್​ ದರ್ಶನ್​, ಯಶ್​ ಅವರು ಸುಮಲತಾ ಪರ ಪ್ರಚಾರ ನಡೆಸುತ್ತಿದ್ದಾರೆ. ಮಂಡ್ಯದಲ್ಲಿ ಮೈತ್ರಿ ಅಭ್ಯರ್ಥಿ ನಿಖಿಲ್​ ಕುಮಾರಸ್ವಾಮಿ ಪರ ಸಿಎಂ ಕುಮಾರಸ್ವಾಮಿ ಅವರೂ ಪ್ರಚಾರ ನಡೆಸಿದ್ದಾರೆ.

Exit mobile version