Site icon PowerTV

ಚೌಕಿದಾರ್​ ಹೇಳಿದ್ದೆಲ್ಲಾ ಸುಳ್ಳು: ರಾಹುಲ್​ ಗಾಂಧಿ

ಕೋಲಾರ: ಚೌಕಿದಾರ್ ಹೇಳಿದ್ದೆಲ್ಲಾ ಬರೀ ಸುಳ್ಳು ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ. ಕೋಲಾರದಲ್ಲಿ ಮೈತ್ರಿ ಪರ್ವದ ಪರಿವರ್ತನಾ ಸಮಾವೇಶದಲ್ಲಿ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, “ಹಿಂದಿನ ಚುನಾವಣೆಯಲ್ಲಿ ಬಿಜೆಪಿ ನೀಡಿದ್ದ ಭರವಸೆ ಈಡೇರಿಲ್ಲ. ಈಗ ಉದ್ಯೋಗ ಸೃಷ್ಟಿ, ಅಭಿವೃದ್ಧಿ ಬಗ್ಗೆ ಮೋದಿ ಮಾತಾಡ್ತಿಲ್ಲ. ಗಬ್ಬರ್ ಸಿಂಗ್ ಟ್ಯಾಕ್ಸ್ ತೆಗೆದು, ಒಂದೇ ರೂಪದ ತೆರಿಗೆ ಜಾರಿ ಮಾಡಬೇಕಿದೆ” ಎಂದು ಹೇಳಿದ್ರು. “ಈ ಚುನಾವಣೆಯಲ್ಲಿ ಎರಡು ಪ್ರಮುಖ ವಿಚಾರಗಳು ಇವೆ. ಮೋದಿ ದೇಶ ಒಡೆಯುವ ವಿಚಾರವನ್ನು ಮುಂದಿರಿಸಿದ್ದಾರೆ. ಕಾಂಗ್ರೆಸ್ ಒಗ್ಗಟ್ಟಿನ ಮಾತನ್ನು ಹೇಳುತ್ತಿದೆ” ಎಂದರು.

Exit mobile version