Site icon PowerTV

ಬಿಜೆಪಿಗೆ ಓಟ್ ಹಾಕೋದಾದ್ರೆ ಹಾಕಿ ಅಂದ್ರು ಕಾಂಗ್ರೆಸ್ ಸಚಿವ

ಬಳ್ಳಾರಿ: ಬಿಜೆಪಿಗೆ ವೋಟ್​ ಹಾಕೋದಾದ್ರೆ ಹಾಕು ಎಂದು ವೈದ್ಯಕೀಯ ಶಿಕ್ಷಣ ಸಚಿವ ತುಕರಾಂ ಮತದಾರಪ್ರಭುಗಳಿಗೆ ಕೈ ಮುಗಿದು ಕೇಳಿದಂತಹ ಘಟನೆ ಬಳ್ಳಾರಿಯಲ್ಲಿ ನಡೆಯಿತು. ಸಂಡೂರು ತಾಲೂಕು ಗಂಗಲಾಪುರ ಗ್ರಾಮದಲ್ಲಿ ಪ್ರಚಾರ ನಡೆಸುತ್ತಿದ್ದ ತುಕರಾಂ ಭಾಷಣ ಮಾಡುವ ಮಧ್ಯದಲ್ಲೇ ಯುವಕ ಪ್ರಶ್ನೆಗಳನ್ನು ಕೇಳಿದ್ದಾರೆ. ಬಳ್ಳಾರಿಯಲ್ಲಿ ಸಚಿವ ತುಕಾರಾಂ ಅವರನ್ನು ತರಾಟೆ ತೆಗೆದುಕೊಂಡ ಮತದಾರ ಪ್ರಭುಗಳು ಜಿಂದಾಲ್​ನಲ್ಲಿ ಉದ್ಯೋಗ ಕೊಡಿಸಲು ಸಚಿವರು ಪ್ರಯತ್ನಿಸ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಚಾರದ ವೇಳೆ ಸಚಿವರಿಗೆ ನೀರಿಳಿಸಿದ ಮತದಾರ ಪ್ರಭುಗಳು ತುಕರಾಂ ಭಾಷಣ ನಡೆಸುವ ಮಧ್ಯೆಯೇ ಪ್ರಶ್ನೆಗಳನ್ನು ಕೇಳಿದ್ದಾರೆ. ಮತದಾರರ ಮಾತಿಗೆ ತಾಳ್ಮೆ ಕಳೆದುಕೊಂಡ ಸಚಿವರು ಸಿನಿಮೀಯ ರೀತಿಯಲ್ಲಿ, “ನೀನು ಬಿಜೆಪಿ ವೋಟ್​ ಹಾಕೋದಾದ್ರೆ ಹಾಕು” ಎಂದು ಕೈಮುಗಿದಿದ್ದಾರೆ.

Exit mobile version