Site icon PowerTV

ಮೋದಿಗೆ ಅಧಿಕಾರದ ಪಿತ್ತ ನೆತ್ತಿಗೆ ಏರಿದೆ : ಸಿದ್ದರಾಮಯ್ಯ

ಮಂಡ್ಯ : ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಧಿಕಾರದ ಪಿತ್ತ ನೆತ್ತಿಗೆ ಏರಿದೆ ಅಂತ ಮಾಜಿ ಸಿಎಂ, ಸಿಎಲ್​ಪಿ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಮಳವಳ್ಳಿಯಲ್ಲಿ ಮಾತನಾಡಿದ ಅವರು, ‘ಪ್ರಧಾನಿ ನರೇಂದ್ರ ಮೋದಿಗೆ ಅಹಂ ಬಂದಿದೆ. ನರೇಂದ್ರ ಮೋದಿಗೆ ಸೋಲಿನ ಭೀತಿ ಎದುರಾಗಿದೆ. ಕೇಂದ್ರ ಸರ್ಕಾರ ವಿರೋಧಿಗಳ ಮೇಲೆ ಐಟಿಯನ್ನ ಉಪಯೋಗಿಸಿಕೊಳ್ಳುತ್ತಿದೆ. ಪುಟ್ಟರಾಜು, ರಿಜ್ವಾನ್ ಅರ್ಷದ್ ಕಚೇರಿ ಮೇಲೆ ದಾಳಿ ಮಾಡ್ತಾರೆ. ಯಡಿಯೂರಪ್ಪ, ಶೋಭಾ ಕರಂದ್ಲಾಜೆ ಮೇಲೂ ದಾಳಿ ಮಾಡ್ಲಿ. ಈಶ್ವರಪ್ಪ ಮನೆಯಲ್ಲಿ ನೋಟಿನಿ ಮಷಿನ್ ಸಿಕ್ಕಿತ್ತು ‘ ಎಂದು ಹರಿಹಾಯ್ದರು.

Exit mobile version