Site icon PowerTV

‘ಉತ್ತಮ ಸಂಘಟಕರ ಬಾಯಲ್ಲಿ ಇದೆಂಥಾ ಮಾತು’..?

ಮೈಸೂರು: ಜೀನ್ಸ್, ಡಿಎನ್‌ಎ ಆಧಾರದಲ್ಲಿ ಟಿಕೆಟ್‌ ನಿಡೋಕಾಗುತ್ತಾ…? ಅನ್ನೋ ಬಿ.ಎಲ್.ಸಂತೋಷ್‌ ಹೇಳಿಕೆಗೆ ಮುಖ್ಯಮಂತ್ರಿ ಚಂದ್ರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಒಳ್ಳೆಯ ಸಂಘಟನಕಾರ ಎಂಬ ಬಿರುದು ತೆಗೆದುಕೊಂಡವರ ಬಾಯಲ್ಲಿ ಇದೆಂಥಾ ಮಾತು ಅಂತ ನಟ ಮುಖ್ಯಮಂತ್ರಿ ಚಂದ್ರು ಅವರು ಮೈಸೂರಿನಲ್ಲಿ ಪ್ರಶ್ನಿಸಿದ್ದಾರೆ.

“ಡಿಎನ್‌ಎ, ಜೀನ್ಸ್‌ ಬಗ್ಗೆ ಮಾತನಾಡೋದು ದೊಡ್ಡ ದುರಂತ. ಯಾವತ್ತು ಗುಣವನ್ನ ಅಳೆಯಬಾರದು. ಅನಂತ್‌ಕುಮಾರ್‌ಗೆ ಗುಣ ಇತ್ತು. ಅವರ ಪತ್ನಿಗೆ ಬಿಜೆಪಿ ಟಿಕೆಟ್‌ ನೀಡಬಹುದಿತ್ತು. ನೀಡದೆ ಇದ್ದರೂ ಪರವಾಗಿಲ್ಲ ಅವಮಾನ ಮಾಡಬಾರದು” ಎಂದಿದ್ದಾರೆ.

“20-25 ವರ್ಷ ಪಕ್ಷ ಸಂಘಟನೆಯ ದೃಷ್ಟಿಯಿಂದ ಟಿಕೆಟ್‌ ನೀಡಿದ್ದೀವಿ ಅಂತೀರಾ. ಹಾಗಾದ್ರೆ ಚಾಮರಾಜನಗರದಲ್ಲಿ ಯಾವ ಆಧಾರದ ಮೇಲೆ ಟಿಕೆಟ್‌ ಕೊಟ್ಟಿದ್ದೀರಿ..? 70-75 ವಯಸ್ಸಿನವರಿಗೆ ಟಿಕೆಟ್ ನೀಡಿದ್ದೀರಲ್ಲಾ ಅದಕ್ಕೆ ಏನಂತಿರಾ? ತುಮಕೂರಿನ ಬಸವರಾಜು, ರಮೇಶ್‌ ರಮೇಶ್ ಜಿಗಜಿಣಗಿ 20-25 ವರ್ಷ ಪಕ್ಷ ಕಟ್ತಾರಾ? ಅವರಿಗೇ ನೀವು ಡಿಎನ್‌ಎ ಟೆಸ್ಟ್‌ ಮಾಡಿಸಿಲ್ವಾ” ಎಂದು ಕೇಳಿದ್ದಾರೆ.

Exit mobile version