Site icon PowerTV

ದೇವೇಗೌಡ್ರ ಕುಟುಂಬದ ವಿರುದ್ಧ ಮೋದಿ ಗುಡುಗು..!

ಕೊಪ್ಪಳ : ಪ್ರಧಾನಿ ನರೇಂದ್ರ ಮೋದಿ ಮಾಜಿ ಪ್ರಧಾನಿ ದೇವೇಗೌಡರ  ಕುಟುಂಬದ ವಿರುದ್ಧ ಗುಡುಗಿದ್ದಾರೆ. ಗಂಗಾವತಿಯಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಅವವರು, ಮೋದಿ ಗೆದ್ದಲ್ಲಿ ನಾನು ಸನ್ಯಾಸ ಪಡೀತೀನಿ ಎಂದಿದ್ರು. ರೇವಣ್ಣ ಸನ್ಯಾಸ ಸ್ವೀಕರಿಸ್ತಾರೆ ಎಂದು ಅನ್ನಿಸುತ್ತಾ? ಸನ್ಯಾಸ ಸ್ವೀಕಾರ ಇರಲಿ, ಮೊದಲು ಸುಳ್ಳು ಹೇಳೋದು ಬಿಡ್ಲಿ. ರೇವಣ್ಣ ಹೇಳಿಕೆಗೆ ಕಿಡಿಕಾರಿದರು.

“ರಾಷ್ಟ್ರವಾದ ಮತ್ತು ಪರಿವಾರ ವಾದದ ಮಧ್ಯದ ಯುದ್ಧವಿದು. ದೇಶದ ಸಮಸ್ಯೆಗಳ ಬಗ್ಗೆ ವಿಪಕ್ಷಗಳಿಗೆ ಕಾಳಜಿಯಿಲ್ಲ. ಅವರದ್ದು ಸ್ವಾರ್ಥಕ್ಕಾಗಿ ಕೆಲಸ, ಕಮೀಷನ್​ ಕೆಲಸ.  ಕಾಂಗ್ರೆಸ್​ ಸರ್ಕಾರ ಇದ್ದಾಗ 10 ಪರ್ಸೆಂಟ್​ ಸರ್ಕಾರ ಇತ್ತು . ಈಗ ಇಬ್ಬರು ಕೈಜೋಡಿಸಿ 20 ಪರ್ಸೆಂಟ್​ ಸರ್ಕಾರ ಆಗಿದೆ” ಎಂದು ಮೈತ್ರಿ ಸರ್ಕಾರದ ವಿರುದ್ಧ ವಾಕ್​ಪ್ರಹಾರ ನಡೆಸಿದರು.

ಎರಡು ಹೊತ್ತಿನ ಊಟಕ್ಕೆ ಗತಿ ಇಲ್ಲದವರು ಸೇನೆಗೆ ಸೇರ್ತಾರೆ ಅನ್ನೋ ಸಿಎಂ ಹೆಚ್​. ಡಿ. ಕುಮಾರಸ್ವಾಮಿ ಹೇಳಿಕೆ ಖಂಡಿಸಿದ ಮೋದಿ, “ಈ ಹೇಳಿಕೆ ಸಿಎಂಗೆ ಶೋಭೆ ತರುತ್ತದೆಯಾ..? ಸಿಎಂ ಹೇಳಿಕೆ ಅವರ ಮನಸಿನ ಹೇಳಿಕೆ ಆಗಿರುತ್ತದೆ. ದೇಶದ ಸೇವೆ ಸಲ್ಲಿಸುವವರಿಗೆ ಇದು ಅವಮಾನ ಅಲ್ವೇ?” ಎಂದು ಪ್ರಶ್ನಿಸಿದ್ದಾರೆ. “ದೇಶಕ್ಕಾಗಿ ತಪಸ್ಸು ಮಾಡುವವರಿಗೆ ಇದು ಅವಮಾನ. ದೇಶದ ಯೋಧರಿಗೆ ಗೌರವ ನೀಡಿವುದು ಗೊತ್ತಿಲ್ಲ” ಎಂದಿದ್ದಾರೆ.

Exit mobile version