Site icon PowerTV

ಯಡಿಯೂರಪ್ಪಗೂ ನಿಂಬೆಹಣ್ಣು ಕೊಡ್ತೀನಿ: ರೇವಣ್ಣ

ಮೈಸೂರು: ಕೆಲವೊಂದಕ್ಕೆ ನಿಂಬೆಹಣ್ಣು ಬೇಕೇಬೇಕು ಅದಕ್ಕೆ ಹಿಡಿದುಕೊಂಡಿರುತ್ತೇನೆ. ಬೇಕಾದ್ರೆ ಯಡಿಯೂರಪ್ಪಗೂ ಒಂದು ನಿಂಬೆಹಣ್ಣು ಕೊಡ್ತೀನಿ ಅಂತ ಸಚಿವ ರೇವಣ್ಣ ಹೇಳಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಸಚಿವ ರೇವಣ್ಣ, ಮೋದಿ ಮತ್ತೊಮ್ಮೆ ಪ್ರಧಾನಿಯಾದ್ರೆ ರಾಜಕೀಯ ನಿವೃತ್ತಿಹೊಂದುವುದಾಗಿ ಹೇಳಿದ್ದಾರೆ. “ಮೋದಿ ಪ್ರಧಾನಿ ಆದ್ರೆ ರಾಜಕೀಯ ನಿವೃತ್ತಿ ಹೊಂದುವೆ. ನಮಗೆ 6, 8, 22 ಅದೃಷ್ಟ ಸಂಖ್ಯೆಗಳು. ರಾಜ್ಯದಲ್ಲಿ ಮೈತ್ರಿ ಸರ್ಕಾರ 22 ಸೀಟುಗಳನ್ನು ಗೆಲ್ಲುತ್ತೆ. ಆ 22 ನಂಬರ್ ನಮಗೆ ಲಕ್ಕಿ. ಆದರೆ ಯಡಿಯೂರಪ್ಪನವರಿಗೆ 22 ಲಕ್ಕಿ ನಂಬರ್ ಅಲ್ಲ” ಎಂದಿದ್ದಾರೆ.

Exit mobile version