Site icon PowerTV

ರಾಹುಲ್​ ಗಾಂಧಿ ಹತ್ಯೆಗೆ ಸಂಚು : ಕಾಂಗ್ರೆಸ್​​ ದೂರು

ಅಮೇಥಿ : ದೇಶದಲ್ಲಿ ಪ್ರಜಾ ಪ್ರಭುತ್ವದ ಹಬ್ಬ ಆರಂಭವಾಗಿದೆ. ಲೋಕ ಸಮರದ ಮೊದಲ ಹಂತದ ಮತದಾನ ನಡೆಯುತ್ತಿದೆ. ಈ ನಡುವೆ ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ ಹತ್ಯೆಗೆ ಸಂಚು ನಡೆದಿದೆ ಅನ್ನೋ ಬೆಚ್ಚಿ ಬೀಳಿಸುವ ಆರೋಪವನ್ನ ಕಾಂಗ್ರೆಸ್​ ಮಾಡಿದೆ.
ರಾಹುಲ್ ಗಾಂಧಿ ನಿನ್ನೆ ಅಮೇಥಿಯಲ್ಲಿ ನಾಮಪತ್ರ ಸಲ್ಲಿಸಿ, ಪ್ರಚಾರದಲ್ಲಿ ಪಾಲ್ಗೊಂಡಿದ್ದಾಗ ಅವರ ಮೇಲೆ 7 ಬಾರಿ ಸ್ನೈಪರ್ ಗನ್ ಲೇಸರ್ ಬೆಳಕು ಬಿದ್ದಿದೆ ಅಂತಾ ಕಾಂಗ್ರೆಸ್​ ಹೇಳಿದ್ದು, ರಾಹುಲ್ ಹತ್ಯೆಗೆ ಸಂಚು ರೂಪಿಸಲಾಗಿದೆ ಎಂದು ಆರೋಪಿಸಿದೆ.
ಈ ಬಗ್ಗೆ ಕೇಂದ್ರ ಗೃಹಸಚಿವಾಲಯಕ್ಕೆ ಪತ್ರ ಬರೆದಿರೋ ಕಾಂಗ್ರೆಸ್​, ಅಮೇಥಿಯಲ್ಲಿ ನಡೆದ  ರೋಡ್ ಶೋ ವೇಳೆ ಸ್ನೈಪರ್ ಗನ್ ಮೂಲಕ ರಾಹುಲ್ ಹತ್ಯೆಗೆ ಸಂಚು ರೂಪಿಸಲಾಗಿದೆ. ಆದ್ರೆ, ಎಸ್‌ಪಿಜಿ ಐಎಸಿಸಿ ಕ್ಯಾಮರಾಮನ್‌ ಒಬ್ಬರು ಮೊಬೈಲ್‌ನಲ್ಲಿ ರಾಹುಲ್‌ ಪ್ರಚಾರವನ್ನ ಚಿತ್ರೀಕರಿಸಿದ್ದು, ಅದು ಮೊಬೈಲ್‌ ನಲ್ಲಿನ ಗ್ರೀನ್ ಕ್ಯಾಮರಾ ಬೆಳಕು ಅಂತಾ ಸ್ಪಷ್ಟಪಡಿಸಿದೆ.

Exit mobile version