Site icon PowerTV

ಮೈಸೂರಿನಲ್ಲಿ ಸಮಲತಾ ಬಗ್ಗೆ ಮೋದಿ ಹೇಳಿದ್ದೇನು..?

ಮೈಸೂರು: ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಮೈಸೂರು ಸಮಾವೇಶದಲ್ಲಿ ರೆಬಲ್​ಸ್ಟಾರ್ ಅಂಬರೀಶ್ ಅವರನ್ನು ನೆನೆಸಿಕೊಂಡಿದ್ದಾರೆ. ಹಾಗೆಯೇ ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಬಗ್ಗೆಯೂ ಮಾತನಾಡಿದ್ದಾರೆ.

ಕರ್ನಾಟಕದಲ್ಲಿ ಮೋದಿ ರಣಕಹಳೆ ಮೊಳಗಿಸಿದ್ದು, ಮೊದಲು ಚಿತ್ರದುರ್ಗ ಹಾಗೂ ನಂತರ ಮೈಸೂರಿನಲ್ಲಿ ಬಿಜೆಪಿ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ್ದಾರೆ. ಮೈಸೂರಿನಲ್ಲಿ ಮಾತನಾಡುವ ಸಂದರ್ಭ ನಟ, ರಾಜಕಾರಣಿ ಅಂಬರೀಶ್ ಅವರನ್ನು ಹಾಗೂ ಸುಮಲತಾ ಅಂಬರೀಶ್ ಅವರನ್ನೂ ನೆನಪಿಸಿಕೊಂಡಿದ್ದಾರೆ. ಈ ಸಂದರ್ಭ ಮಾತನಾಡಿ, “ಅಂಬರೀಶ್ ಮಾಡಿರೋ ಸೇವೆ ಜನರ ಮನದಲ್ಲಿದೆ. ಅಂಬರೀಶ್ ಜೊತೆ ಸೇರಿ ಸುಮಲತಾ ಅವರೂ ಕನ್ನಡ ಭಾಷೆ ಸಂಸ್ಕೃತಿಯ ಸೇವೆ ಮಾಡಿದ್ದಾರೆ. ನೀವು ಹಾಕೋ ಪ್ರತಿ ಮತಗಳು ನನಗೆ ಬೆಂಬಲ ಕೊಟ್ಟಂತೆ” ಎಂದಿದ್ದಾರೆ.

Exit mobile version