Site icon PowerTV

ಬಾಡಿಗೆ ಕಟ್ಟೋ ಯೋಗ್ಯತೆ ಇಲ್ಲ ಅಂದಿದ್ದ ನಿಖಿಲ್​ಗೆ ಯಶ್ ತಿರುಗೇಟು..!

ಬಾಡಿಗೆ ಕಟ್ಟೋ ಯೋಗ್ಯತೆ ಇಲ್ಲದವರು ನನ್ನ ಬಗ್ಗೆ ಮಾತಾಡ್ತಾರೆ ಎಂಬ ಮಂಡ್ಯ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರಿಗೆ ರಾಕಿಂಗ್​ ಸ್ಟಾರ್ ಯಶ್ ಖಾರವಾಗಿ ಉತ್ತರಿಸಿದ್ದಾರೆ.
ಮಂಡ್ಯದಲ್ಲಿ ಮಾತನಾಡಿದ ಯಶ್, ”ಬಾಡಿಗೆ ಕಟ್ಟೋ ಯೋಗ್ಯತೆ ಇಲ್ಲ ಅಂದ್ರಲ್ಲ? ಒಂದು ವಿಷ್ಯ ಹೇಳೋಕೆ ಇಷ್ಟ ಪಡ್ತೀನಿ. ಜನ ಅಷ್ಟೇನು ದಡ್ಡರಲ್ಲ. ಹೌದಪ್ಪಾ, ನಮಗೇ ಬಾಡಿಗೆ ಕಟ್ಟೋ ಯೋಗ್ಯತೆ ಇಲ್ಲ ಅಂತಾನೇ ಇಟ್ಕೋಳಣ. ಆದ್ರೆ, ಬಾಡಿಗೆ ಕಟ್ಟೋ ಆ ದುಡ್ಡಲ್ಲಿ, ಕುಡಿಯಲು ನೀರಿಲ್ಲದವರಿಗೆ ಸಹಾಯ ಮಾಡಿದ್ದೇವೆ. ರೈತರ ಬಗ್ಗೆ ಬರೀ ಬಾಯಲ್ಲಿ ಮಾತಾಡೋದಲ್ಲ. ನನ್​ ದುಡ್ಡಲ್ಲಿ, ನನ್ ದುಡಿಮೆ ದುಡ್ಡಲ್ಲಿ ಜನರಿಗೆ ಸಹಾಯ ಮಾಡೋಕೆ ಭಗವಂತ ಯೋಗ್ಯತೆ ಕೊಡುತ್ತಾನೆ. ಇದನ್ನು ನಾನು ಹೇಳಬೇಕಿಲ್ಲ. ಕೊಪ್ಪಳ ಅಂತ ಒಂದು ಊರಿದೆ ಅಲ್ಲಿಗೆ ಹೋಗಿ ಕೇಳಿ. ಜನ ಹೇಳ್ತಾರೆ, ಇಲ್ಲ ಅಂದ್ರೆ ಹೇಳಿದಂಗೆ ಕೇಳ್ತೀನಿ’ ಎಂದು ತಿರುಗೇಟು ನೀಡಿದ್ರು.

Exit mobile version