Site icon PowerTV

ಅಂಬಿ ಫ್ಯಾಮಿಲಿ ವಿರುದ್ಧ ಮಾತಾಡಿದ್ರೆ ಫಾರಿನ್​ ಟ್ರಿಪ್​..!

ಮಂಡ್ಯ: ಅಂಬರೀಶ್ ಅವರ ಕುಟುಂಬದ ವಿರುದ್ಧ ಕೆಟ್ಟದಾಗಿ ಹೇಳಿದರೆ ಫಾರಿನ್ ಟ್ರಿಪ್​, ಬೆಂಗಳೂರಲ್ಲಿ ಮನೆ, 10 ಲಕ್ಷದ ರೂಪಾಯಿ ನಗದು ನೀಡುವ ಆಮಿಷ ಮಾಡಲಾಗಿದೆ ಅಂತ ಸುಮಲತಾ ಅಂಬರೀಶ್ ಆರೋಪಿಸಿದ್ದಾರೆ. ಅಂಬಿ ಕುಟುಂಬದ ವಿರುದ್ಧ ಕೆಟ್ಟದಾಗಿ ಹೇಳುವಂತೆ ಅಂಬಿ ಆಪ್ತರ ಮೇಲೆ ಒತ್ತಡ ಹೇರಲಾಗ್ತಿದೆ ಅನ್ನೋ ವಿಚಾರವನ್ನು ಸುಮಲತಾ ಬಿಚ್ಚಿಟ್ಟಿದ್ದಾರೆ.

ಹೊಸ ಬಾಂಬ್ ಸಿಡಿಸಿದ ಸುಮಲತಾ ಅಂಬರೀಶ್ ಅವರು, “ನಮ್ಮ ಯಜಮಾನರ ಜೊತೆ ಕೆಲಸ ಮಾಡುತ್ತಿದ್ದ ಇಬ್ಬರಿಗೆ ಆಮಿಷ ಒಡ್ಡಲಾಗಿದ್ದು, ಅಂಬಿ ಕುಟುಂಬದ ಬಗ್ಗೆ ಕೆಟ್ಟದಾಗಿ ಹೇಳಿದ್ರೆ ಬೆಂಗಳೂರಿನಲ್ಲಿ ನಿವೇಶನ, 10 ಲಕ್ಷ ಹಣದ ಆಮಿಷ ಒಡ್ಡಲಾಗಿದೆ. ಆ ಕುಟುಂಬದವರೇ ನಮಗೆ ಮಾಹಿತಿ ನೀಡಿದ್ದಾರೆ. ಇಷ್ಟೊಂದು ಕೆಟ್ಟ ರಾಜಕಾರಣ ನಾನು ನೋಡಿರಲಿಲ್ಲ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಹಾಗೆಯೇ ವಾರದೊಳಗೆ ಸುದ್ದಿಗೋಷ್ಠಿ ಮಾಡುವ ಸಾಧ್ಯತೆ ಇದೆ ಎಂದಿದ್ದಾರೆ. “ಅಂಬಿ ಆಪ್ತರು ಮತ್ತು ನೌಕರರನ್ನು ಜೆಡಿಎಸ್ ಸಂಪರ್ಕ ಮಾಡಿದ್ದು, ಅಂಬಿ ಕುಟುಂಬದ ಬಗ್ಗೆ ಕಟ್ಟದಾಗಿ ಮಾತಾಡಲು ಜೆಡಿಎಸ್​ನ ಭರ್ಜರಿ ಆಫರ್​ ನೀಡುತ್ತಿದೆ ಅನ್ನೋ ಮಾತು ಕೇಳಿ ಬಂದಿದೆ. 10-15 ಲಕ್ಷ ನಗದು, ಫಾರಿನ್​ ಟ್ರಿಪ್​ ಹಾಗೂ ಬೆಂಗಳೂರಲ್ಲಿ ಸೈಟ್​ ಆಫರ್​ ನೀಡಲಾಗಿದೆ. ಈ ಮೂಲಕ ಜೆಡಿಎಸ್​ ಕುತಂತ್ರ ನಡೆಸಿದೆ” ಎಂದು ಸುಮಲತಾ ಅಂಬರೀಶ್​ ಗಂಭೀರ ಆರೋಪ ಮಾಡಿದ್ದಾರೆ. ಹಾಗೆಯೇ ಆಫರ್​ ಮಾಡಿರುವ ಬಗ್ಗೆ ಆಪ್ತರಿಂದಲೇ ಮಾಹಿತಿ ಸುಮಲತಾಗೆ ಸಿಕ್ಕಿರೋದಾಗಿ ಹೇಳಲಾಗ್ತಿದೆ.

Exit mobile version