ಕನ್ನಡದ ಸದ್ಯದ ಹೈ ವೋಲ್ಟೇಜ್ ಸಿನಿಮಾ ಅಂದ್ರೆ ಅದು ಕಿಚ್ಚ ಸುದೀಪ್ ಅವರ ಪೈಲ್ವಾನ್. ಪೈಲ್ವಾನ್ ಶುರುವಾದಾಗಿನಿಂದ ಹೈಪ್ ಜಾಸ್ತಿ ಆಗ್ತಾ ಇದೆ . ಈಗ ಪೈಲ್ವಾನ್ ರಿಲೀಸ್ ಡೇಟ್ ಯಾವಾಗ ಅನ್ನೋದು ಕನ್ನಡಿಗರಿಗೆ ಕಾಡುವ ಪ್ರಶ್ನೆ.. ಈ ಪ್ರಶ್ನೆಗೆ ಎಕ್ಸ್ಕ್ಲೂಸಿವ್ ಆನ್ಸರ್ ಸಿಕ್ಕಿದೆ.
ಪೈಲ್ವಾನ್ ಸೌತ್ ಸಿನಿ ದುನಿಯಾದ ಬಹು ನಿರೀಕ್ಷಿತ ಚಿತ್ರ. ಮೊದಲ ಬಾರಿಗೆ ಕಿಚ್ಚ ಸಿಕ್ಸ್ ಪ್ಯಾಕ್ ಮಾಡಿಕೊಂಡು ಅಭಿಮಾನಿಗಳ ಮುಂದೆ ಕಾಣಿಸಿಕೊಂಡಿದ್ದಾರೆ. ಹಿಟ್ ಜೋಡಿ ಕೃಷ್ಣ ಹಾಗು ಕಿಚ್ಚನ ಎರಡನೇ ಸಿನಿಮಾ ಇದು . ಸಿನಿಮಾ ಅನೌನ್ಸ್ ಆಗಿದ್ದೇ ತಡ… ಕಿಚ್ಚನ ಅಭಿಮಾನಿಗಳಿಗೆ ಕಿಕ್ ಕೊಡ್ತು . ಯಾವಾಗ ಟೀಸರ್ ರಿಲೀಸ್ ಆಯಿತೋ ಕನ್ನಡಿಗರಿಗೆ ಬಾಡೂಟವನ್ನೇ ಬಡಿಸಿತ್ತು ಪೈಲ್ವಾನ್..!
ನಿರ್ದೇಶಕ ಕಮ್ ನಿರ್ಮಾಪಕ ಕೃಷ್ಣ ಆಗಾಗ ಪೈಲ್ವಾನ್ ನ ಕೆಲ ತುಣುಕುಗಳನ್ನ ತೋರಿಸಿ ಅಭಿಮಾನಿಗಳಿಗೆ ಆಗಾಗ ಕಿಕ್ ಕೊಡ್ತಾನೇ ಇದ್ದಾರೆ . ಟೀಸರ್ ರಿಲೀಸ್ ಆದಾಗ ಬೇಸಿಗೆಗೇ ಸಿನಿಮಾ ರಿಲೀಸ್ ಅಂತ ಬರೆದುಕೊಂಡಿದ್ದರು . ಆಗ ಸಿನಿಮಾ ರಿಲೀಸ್ ಬಗ್ಗೆ ಅಭಿಮಾನಿಗಳ ಲೆಕ್ಕಾಚಾರ ಶುರುವಾಗಿತ್ತು.
ಅಭಿಮಾನಿಗಳ ಲೆಕ್ಕಾಚಾರದ ಪ್ರಕಾರ ಬೇಸಿಗೆಗೆ ಅಂದ್ರೆ ಏಪ್ರಿಲ್ ಅಥವಾ ಮೇ ನಲ್ಲಿ ಸಿನಿಮಾ ರಿಲೀಸ್ ಆಗಬಹುದು ಅನ್ನೋದು . ಆದ್ರೆ ಈಗ ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಆಗಿದೆ . ಈ ಡೇಟ್ ಕೇಳಿದ್ರೆ ಅಭಿಮಾನಿಗಳು ಶಾಕ್ ಆಗೋದು ಮಾತ್ರ ಕನ್ಫರ್ಮ್.
ಯೆಸ್ .. ನಿರ್ದೇಶಕ ಕೃಷ್ಣ ಈಗ ಅಭಿಮಾನಿಗಳಿಗೆ ಶಾಕ್ ಕೊಟ್ಟಿದ್ದಾರೆ. ಪೈಲ್ವಾನ್ ಬೇಸಿಗೆಗೆ ಬರೋದಿಲ್ಲ. ಪೈಲ್ವಾನ್ ಎಂಟ್ರಿ ಡೇಟ್ ಸಿಕ್ಕಾಪಟ್ಟೆ ಮುಂದೆ ಹೋಗಿದೆ . ಕೃಷ್ಣ ಹೇಳುವ ಪ್ರಕಾರ ಪೈಲ್ವಾನ್ ಎಂಟ್ರಿಗೆ ಇನ್ನು ಐದು ತಿಂಗಳು ಬೇಕಾಗುತ್ತೆ..! ಅದ್ರಂತೆ ಕಿಚ್ಚನ ಪೈಲ್ವಾನ್ ಅಖಾಡಕ್ಕೆ ಒಂದು ಡೇಟ್ ಕೂಡ ಫಿಕ್ಸ್ ಆಗಿದೆ.. ನಾವ್ ಹೇಳ್ತಿರೋದು ಪಕ್ಕಾ ಡೇಟ್..!
ಆಗಸ್ಟ್ 9ಕ್ಕೆ ಪೈಲ್ವಾನ್ ತೆರೆಕಾಣಲಿದೆ. ನಿರ್ದೇಶಕ ಕೃಷ್ಣ ವರಮಹಾಲಕ್ಷ್ಮಿ ಹಬ್ಬಕ್ಕೆ ಪೈಲ್ವಾನ್ ರಿಲೀಸ್ ಮಾಡ್ತಾ ಇದ್ದಾರೆ . ಮೊದಲು ಬೇಸಿಗೆ ಟೈಮ್ ನಲ್ಲಿ ರಿಲೀಸ್ ಆಗುತ್ತೆ ಅಂತ ಹೇಳಿ ಈಗ ಯಾಕೆ ಇಷ್ಟು ಲೇಟ್ ಅನ್ನೋ ಅನುಮಾನ ಕಿಚ್ಚನ ಅಭಿಮಾನಿಗಳಿಗೆ ಕಾಡೋದು ಸಹಜ .
ಪೈಲ್ವಾನ್ ಒಟ್ಟು ಎಂಟು ಭಾಷೆಗಳಲ್ಲಿ ಏಕ ಕಾಲಕ್ಕೆ ಬಿಡುಗಡೆ ಮಾಡು ಡಿಸೈಡ್ ಮಾಡಿದ್ದಾರೆ ನಿರ್ದೇಶಕರು . ನಮಗೆಲ್ಲಾ ಗೊತ್ತಿರುವ ಹಾಗೆ ಕಿಚ್ಚನಿಗೆ ಉತ್ತರ ಭಾರತದದಲ್ಲೂ ಅತಿ ಹೆಚ್ಚು ಬೇಡಿಕೆ ಇದೆ . ಆ ಕಾರಣಕ್ಕೆ ಭೋಜಪುರಿ , ಮರಾಠಿ ಹಾಗು ಹಿಂದಿ ಭಾಷೆಗಳಲ್ಲಿ ಪೈಲ್ವಾನ್ ಅಬ್ಬರಿಸಲಿದ್ದಾನೆ.
ಅದಲ್ಲದೆ ದಕ್ಷಿಣದಲ್ಲಿ , ತೆಲಗು , ತಮಿಳು . ಮಲಯಾಳಂನಲ್ಲಿ ಪೈಲ್ವಾನ್ ನ ಅಬ್ಬರ ಶುರುವಾಗುತ್ತೆ . ದಕ್ಷಿಣದಲ್ಲಿಯೂ ಕಿಚ್ಚನಿಗೆ ತುಂಬಾ ಫ್ಯಾನ್ ಫಾಲೋಯಿಂಗ್ ಇದೆ ಆ ಕಾರಣಕ್ಕೆ ಒಟ್ಟು ಎಂಟು ಭಾಷೆಗಳಲ್ಲಿ ಪೈಲ್ವಾನ್ ರಿಲೀಸ್ ಆಗಲಿದೆ . ಇದೇ ಕಾರಣಕ್ಕೆ ಪೈಲ್ವಾನ್ ರಿಲೀಸ್ ಆಗೋದು ಮುಂದೆ ಹೋಗಿದೆ . ಪೈಲ್ವಾನ್ ಪೋಸ್ಟ್ ಫೋನ್ ಆಗಿದ್ದಕ್ಕೆ ಬೇಸರಗೊಂಡಿರೋ ಫ್ಯಾನ್ಸ್ ಎಂಟು ಭಾಷೆಗಳಲ್ಲಿ ಒಂದೇ ಕಾಲಕ್ಕೆ ರಿಲೀಸ್ ಆಗೋದ್ರಿಂದ ಫುಲ್ ಖುಷ್ ಆಗಿದ್ದಾರೆ.
ಒಟ್ಟಿನಲ್ಲಿ ಕನ್ನಡದಲ್ಲಿ ಟೀಸರ್ ಹಾಗು ಪೋಸ್ಟರ್ ಮೂಲಕವೇ ಅಬ್ಬರಿಸಿದ್ದ ಪೈಲ್ವಾನ್ ಈಗ ಭಾರತದ ಎಂಟು ಭಾಷೆಗಳಲ್ಲಿ ಅಬ್ಬರಿಸೋದು ಕನ್ಫರ್ಮ್. ಹೆಬ್ಬುಲಿಯ ನಂತ್ರ ಮಾಣಿಕ್ಯನನ್ನು ಸೋಲೋ ಹೀರೊ ಆಗಿ ನೋಡಲು ಆಗಸ್ಟ್ 9 ರ ವರೆಗೆ ಕಾಯಲೇ ಬೇಕು.
-ಮನೋಜ್ ನರಗುಂದಕರ್
‘ಪೈಲ್ವಾನ್’ ರಿಲೀಸ್ ಡೇಟ್ ಫಿಕ್ಸ್..!
RELATED ARTICLES
Recent Comments
on ಕ್ಷಮಿಸಿ ಪಾಕ್ ಅಭಿಮಾನಿಗಳೇ, 10 ನಿಮಿಷದಲ್ಲಿ ಟಿವಿ ಡೆಲಿವರಿ ಮಾಡೋಕೇ ಆಗಲ್ಲ: ಪಾಕ್ನ ಟ್ರೋಲ್ ಮಾಡಿದ ಬ್ಲಿಂಕ್ಇಟ್
on ಗ್ರಾಮಿಣ ಬಾಗದ ಕಾಲೇಜನ್ನು ಬೆಳಗಾವಿಗೆ ಸ್ಥಳಾಂತರ ವಿರುದ್ದ ಸತ್ಯಾಗ್ರಹ ಮಾಡುತ್ತೆನೆ ಅದಕ್ಕಾಗಿ ಜೈಲಿಗೆ ಹೋಗಲು ಸಿದ್ದ
on Makar Sankranti 2024: ಮಕರ ಸಂಕ್ರಾಂತಿ ಹಬ್ಬದ ವಿಶೇಷತೆಗಳೇನು..? ಈ ದಿನ ಎಳ್ಳಿಗೆ ಯಾಕೆ ಮಹತ್ವ? ಇಲ್ಲಿದೆ ಮಾಹಿತಿ
on Makar Sankranti 2024: ಮಕರ ಸಂಕ್ರಾಂತಿ ಹಬ್ಬದ ವಿಶೇಷತೆಗಳೇನು..? ಈ ದಿನ ಎಳ್ಳಿಗೆ ಯಾಕೆ ಮಹತ್ವ? ಇಲ್ಲಿದೆ ಮಾಹಿತಿ
on Makar Sankranti 2024: ಮಕರ ಸಂಕ್ರಾಂತಿ ಹಬ್ಬದ ವಿಶೇಷತೆಗಳೇನು..? ಈ ದಿನ ಎಳ್ಳಿಗೆ ಯಾಕೆ ಮಹತ್ವ? ಇಲ್ಲಿದೆ ಮಾಹಿತಿ
on ಅಷ್ಟಕ್ಕೂ ಕಲಂ 370, 35(ಎ)ರ ಅಡಿಯಲ್ಲಿ ಜಮ್ಮು-ಕಾಶ್ಮೀರಕ್ಕೆ ಸಿಕ್ಕಿದ್ದ ವಿಶೇಷ ಸವಲತ್ತುಗಳೇನು? ಅದರ ಇತಿಹಾಸವೇನು?
on ಜೈಲಿನಲ್ಲಿ ಖೈದಿಗಳ ಎಡವಟ್ಟು : ಕೇಕ್ ತಯಾರಿಸಲು ತಂದಿದ್ದ ಎಸೆನ್ಸ್ ಕುಡಿದು ಓರ್ವ ಸಾವು, ಇಬ್ಬರ ಸ್ಥಿತಿ ಗಂಭೀರ !
on Makar Sankranti 2024: ಮಕರ ಸಂಕ್ರಾಂತಿ ಹಬ್ಬದ ವಿಶೇಷತೆಗಳೇನು..? ಈ ದಿನ ಎಳ್ಳಿಗೆ ಯಾಕೆ ಮಹತ್ವ? ಇಲ್ಲಿದೆ ಮಾಹಿತಿ
on ಅಭಿವೃದ್ಧಿ ಮಾಡ್ತೀನಿ ಅನ್ನೋದು ಓಕೆ, ಮಗನನ್ನು ಗೆಲ್ಲಿಸಿದ್ರೆ ಅಭಿವೃದ್ಧಿ ಅನ್ನೋದೇಕೆ? : ಸಿಎಂಗೆ ಸುಮಲತಾ ಪ್ರಶ್ನೆ..!
on Makar Sankranti 2024: ಮಕರ ಸಂಕ್ರಾಂತಿ ಹಬ್ಬದ ವಿಶೇಷತೆಗಳೇನು..? ಈ ದಿನ ಎಳ್ಳಿಗೆ ಯಾಕೆ ಮಹತ್ವ? ಇಲ್ಲಿದೆ ಮಾಹಿತಿ


