Site icon PowerTV

ನಕ್ಸಲ್​ ದಾಳಿ : ಬಿಜೆಪಿ ಶಾಸಕ ದುರ್ಮರಣ..!

ರಾಯ್​ಪುರ್ : ಛತ್ತೀಸ್​ಗಢದಲ್ಲಿ ಕೆಂಪು ಉಗ್ರರು ಮೊತ್ತೊಮ್ಮೆ ಅಟ್ಟಹಾಸ ಮೆರೆದಿದ್ದಾರೆ. ಮೊದಲ ಹಂತದ ಚುನಾವಣೆಗೆ ಮುನ್ನ ನಕ್ಸಲರು ಭಯಾನಕ ದಾಳಿ ನಡೆಸಿದ್ದು, ಬಿಜೆಪಿ ಶಾಸಕರೊಬ್ಬರು ದುರ್ಮರಣವನ್ನಪ್ಪಿದ್ದಾರೆ. ಜೊತೆಗೆ ನಾಲ್ವರು ಯೋಧರು ಹುತಾತ್ಮರಾಗಿದ್ದಾರೆ.
ದಾಂತೆವಾಡದಲ್ಲಿ ನಕ್ಸಲರು ಐಇಡಿ ಬಾಂಬ್ ಬಳಸಿ ಬಿಜೆಪಿ ಶಾಸಕ ಭೀಮಾ ಮಾಂಡವಿ ಅವರ ವಾಹನವನ್ನು ಸ್ಫೋಟಿಸಿದ್ದು, ಪರಿಣಾಮ ಶಾಸಕರು ದುರ್ಮರಣವನ್ನಪ್ಪಿದ್ದಾರೆ. ಶಾಸಕರ ಭದ್ರತೆಗೆ ನಿಯೋಜಿಸಿದ್ದ ನಾಲ್ವರು ಯೋಧರು ಹುತಾತ್ಮರಾಗಿದ್ದಾರೆ.

Exit mobile version