Site icon PowerTV

ಮೋದಿಯವರ 1000 ಯೋಜನೆ ಪ್ರದರ್ಶಿಸಿ ನೂತನ ಅಭಿಯಾನ

ಮೈಸೂರು: ಲೋಕಸಭಾ ಚುನಾವಣೆ ಸಮೀಪಿಸಿದ್ದು ಪ್ರಚಾರ ಕಾರ್ಯ ಭರದಿಂದ ಸಾಗಿದೆ. ಮೈಸೂರಿನಲ್ಲಿ ಮೋದಿ ಅಭಿಮಾನಿಗಳು ವಿನೂತನ ರೀತಿಯಲ್ಲಿ ಅಭಿಯಾನ ನಡೆಸಿದ್ದಿ, ಮೋದಿ ಅವರ ಸಾವಿರ ಯೋಜನೆಗಳ, ಸಾಧನೆಗಳನ್ನು ಪ್ರದರ್ಶಿಸಿ ಅಭಿಮಾನ ವ್ಯಕ್ತಪಡಿಸಿದ್ದಾರೆ. ಚಾಮುಂಡಿಬೆಟ್ಟದ ತಪ್ಪಲಿನ 1000 ಮೆಟ್ಟಿಲುಗಳ ಬಳಿ ಅಭಿಯಾನ ನಡೆಸಲಾಗಿದೆ. ಟೀಂ ಮೋದಿ ಸೇರಿ 20ಕ್ಕೂ ಹೆಚ್ಚು ಸಂಘಟನೆಗಳು ಅಭಿಯಾನದಲ್ಲಿ ಭಾಗಿಯಾಗಿದ್ದು, ಮೋದಿ ಅವರ ವಿದೇಶಿ ಅಭಿಮಾನಿಗಳು ಪಾಲ್ಗೊಂಡಿದ್ದಾರೆ. ವಿದೇಶಿಯರು ಮೋದಿ ಕಟೌಟ್ ಹಿಡಿದು ಅಭಿಯಾನಕ್ಕೆ ಸಾಥ್ ನೀಡಿದ್ದಾರೆ.

ಮೋದಿ ಮತ್ತೊಮ್ಮೆ ಪ್ರಧಾನಿ ಅಭಿಯಾನದಲ್ಲಿ ಮಾತಿನ ಚಕಮಕಿ ನಡೆದಿದ್ದು, ಅಭಿಮಾನಿಗಳು ಭಿತ್ತಿಪತ್ರ ಹಿಡಿದು ಮೆಟ್ಟಿಲು ಹತ್ತಲು ಮುಂದಾಗಿದ್ದಾರೆ. ಈ ವೇಳೆ ಭಿತ್ತಿಪತ್ರ ಪ್ರದರ್ಶಿಸದಂತೆ ಚುನಾವಣಾಧಿಕಾರಿಗಳ ತಾಕೀತು ಮಾಡಿದ್ದಾರೆ. ಅಭಿಮಾನಿಗಳು, ಚುನಾವಣಾಧಿಕಾರಿಗಳ ನಡುವೆ ವಾಗ್ವಾದ ನಡೆದಿದೆ. ಮಾತಿನ ಚಕಮಕಿ ವೇಳೆ ಶಾಸಕ ರಾಮದಾಸ್ ಮಧ್ಯ ಪ್ರವೇಶಿಸಿದ್ದಾರೆ. ಪೊಲೀಸರ ವಿರುದ್ಧವೇ ತಿರುಗಿಬಿದ್ದ ಅಭಿಮಾನಿಗಳು ಭಿತ್ತಿಪತ್ರಗಳನ್ನು ಬಿಟ್ಟು ಬರಿಗೈಯಲ್ಲಿ ಬೆಟ್ಟ ಹತ್ತಿದರು.

Exit mobile version