Site icon PowerTV

ಜೆಡಿಎಸ್-ಕಾಂಗ್ರೆಸ್ ಮಧ್ಯೆ ಫೈಟ್ ಇದೆ: ಸಿದ್ದರಾಮಯ್ಯ

ಬೆಂಗಳೂರು: ಸಾಕಷ್ಟು ವರ್ಷಗಳಿಂದ ಮೈಸೂರು ಜೆಡಿಎಸ್, ಕಾಂಗ್ರೆಸ್ ಮಧ್ಯೆ ಫೈಟ್ ಇದೆ. ಹೀಗಾಗಿ ಮೈತ್ರಿ ಸಮಯದಲ್ಲೂ ಕೆಲ ಸಮಸ್ಯೆಗಳು ಉಳಿದುಕೊಂಡಿದೆ ಅಂತ ಬೆಂಗಳೂರಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಮೈತ್ರಿ ಬಿಕ್ಕಟ್ಟು ಬಗ್ಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಅವರು, “ನಾನು ಸಚಿವ ಜಿ.ಟಿ. ದೇವೇಗೌಡರಿಗೆ ದೂರವಾಣಿ ಕರೆ ಮಾಡಿದ್ದೆ. ಸಣ್ಣಪುಟ್ಟ ಸಮಸ್ಯೆ ಇತ್ತು. ಸರಿ ಹೋಗಿದೆ ಅಂದಿದ್ದಾರೆ. ಜಿಟಿಡಿ ಹಾಗೂ ನಮ್ಮ ನಡುವೆ ವ್ಯತ್ಯಾಸವಿತ್ತು, ಈಗ ಸರಿಹೋಗಿದೆ” ಎಂದಿದ್ದಾರೆ.

ಪಕ್ಷ ವಿರೋಧಿ ಚಟುವಟಿಕೆ ಮಾಡಿದವರಿಗೆ ಖಡಕ್ ಎಚ್ಚರಿಕೆ ನೀಡಿದ ಸಿದ್ದರಾಮಯ್ಯ,” ಮೈತ್ರಿ ಒಪ್ಪದವರು ಪಕ್ಷ ತ್ಯಾಗ ಮಾಡಬಹುದು. ಮೈಸೂರು-ಕೊಡಗು ಕ್ಷೇತ್ರದಲ್ಲಿ ಪ್ರತಾಪ್ ಸಿಂಹ ಸೋಲ್ತಾರೆ. ಮೈಸೂರು ಕ್ಷೇತ್ರದ ಚುನಾವಣೆ ನಮ್ಮ ಪ್ರತಿಷ್ಠೆ. ಜಿಲ್ಲೆಯಲ್ಲಿ ಸಣ್ಣ ಪುಟ್ಟ ಸಮಸ್ಯೆ ಇರೋದು ಸತ್ಯ. ಆದರೂ ನಾವು ಜಂಟಿಯಾಗಿ ಪ್ರಚಾರ ಮಾಡುತ್ತೇವೆ” ಅಂತ ಹೇಳಿದ್ದಾರೆ.

Exit mobile version