Site icon PowerTV

ಯೋಗಿಗೆ ಚುನಾವಣಾ ಆಯೋಗ ಕೊಟ್ಟ ಖಡಕ್​ ಎಚ್ಚರಿಕೆ ಏನು..?

ದೆಹಲಿ: ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಭಾರತೀಯ ಸೇನೆಯನ್ನು ‘ಮೋದಿ ಸೇನೆ’ ಅಂತ ಹೇಳಿರುವ ಬಗ್ಗೆ ಚುನಾವಣಾ ಆಯೋಗ ಖಡಕ್ ಎಚ್ಚರಿಕೆ ನೀಡಿದೆ. ಮುಂದಿನ ದಿನಗಳಲ್ಲಿ ಈ ರೀತಿಯ ಮಾತುಗಳನ್ನಾಡದಂತೆ ಯೋಗಿ ಅವರಿಗೆ ಚುನಾವಣಾ ಆಯೋಗ ಎಚ್ಚರಿಸಿದೆ. “ಭವಿಷ್ಯದಲ್ಲಿ ಇಂತಹ ಹೇಳಿಕೆ ನೀಡಬಾರದು. ಭಾರತೀಯ ಸೇನೆಯನ್ನು ರಾಜಕೀಯಕ್ಕೆ ಬಳಸಬಾರದು. ಭಾರತೀಯ ಸೇನೆ ಇರುವುದು ದೇಶವನ್ನು ರಕ್ಷಿಸುವುದಕ್ಕೆ. ಸೇನೆ ಬಗ್ಗೆ ಯಾರೂ ಈ ರೀತಿಯ ಹೇಳಿಕೆ ನೀಡಬಾರದು” ಅಂತ ಚುನಾವಣಾ ಆಯೋಗ ಎಚ್ಚರಿಸಿದೆ.

ಉತ್ತರಪ್ರದೇಶದಲ್ಲಿ ನಡೆದ ಚುನಾವಣಾ ಪ್ರಚಾರದ ಸಂದರ್ಭ ಮಾತನಾಡಿದ ಯೋಗಿ ಆದಿತ್ಯನಾಥ್ ಅವರು ಭಾರತದ ಸೇನೆಯನ್ನು ಮೋದಿಯವರ ಸೇನೆ ಅಂತ ಹೆಳಿದ್ದರು. ಲೋಕಸಭಾ ಚುನಾವಣೆ ಸಮೀಪದಲ್ಲಿದ್ದು ಯೋಗಿ ನೀಡಿದ ವಿವಾದಾತ್ಮಕ ಹೇಳಿಕೆಯನ್ನು ಪ್ರತಿಪಕ್ಷಗಳು ತೀವ್ರವಾಗಿ ಖಂಡಿಸಿತ್ತು. ಇದೀಗ ಚುನಾವಣಾ ಆಯೋಗವೂ ಯೋಗಿಯವರಿಗೆ ಮುಂದಿನ ದಿನಗಳಲ್ಲಿ ಇಂತಹ ಮಾತುಗಳನ್ನಾಡದಂತೆ ಹೇಳಿದೆ.

ಗಾಝಿಯಾಬಾದ್​ನಲ್ಲಿ ಪ್ರಚಾರದ ಸಂದರ್ಭ ಮಾತನಾಡಿದ ಯೋಗಿ ಆದಿತ್ಯನಾಥ್ ಅವರು, “ಕಾಂಗ್ರೆಸ್​ನವರು ಭಯೋತ್ಪಾದಕರಿಗೆ ಬಿರಿಯಾನಿ ತಿನ್ನಿಸುತ್ತಾರೆ, ಆದರೆ ಮೋದಿಯವರ ಸೇನೆ ಉಗ್ರರಿಗೆ ಬುಲೆಟ್ಸ್​ ಮತ್ತು ಬಾಂಬ್​ಗಳನ್ನು ನೀಡುತ್ತಾರೆ” ಅಂತ ಹೇಳಿದ್ದರು.

Exit mobile version