Site icon PowerTV

ಸಿಎಂ ಕುಮಾರಸ್ವಾಮಿಗೆ ದರ್ಶನ‌ ನಿರಾಕರಿಸಿದ ಗುರೂಜಿ..!

ಚಿಕ್ಕಮಗಳೂರು: ಸಿಎಂ ಹೆಚ್​. ಡಿ. ಕುಮಾರಸ್ವಾಮಿ ಅವರಿಗೆ ವಿನಯ್ ಗುರೂಜಿ ಅವರು ದರ್ಶನ ನಿರಾಕರಿಸಿದ್ದಾರೆ. “ಸಾಮಾನ್ಯ ಭಕ್ತರು ಒಂದೇ, ಸಿಎಂ ಸಹ ಒಂದೇ. ಸಾಮಾನ್ಯ ಭಕ್ತರಿಗೂ ಪ್ರತಿಷ್ಠಿತರಿಗೂ ಒಂದೇ ನಿಯಮ” ಗುರೂಜಿ ಹೇಳಿದ್ದಾರೆ. ಪ್ರತಿ ಗುರುವಾರ ಮಾತ್ರ ದರ್ಶನಕ್ಕೆ ಅವಕಾಶ ನೀಡುವ ಗೌರಿಗದ್ದೆಯ ಸ್ವರ್ಣ ಪೀಠಕೇಶ್ವರಿ ದತ್ತಾಶ್ರಮದ ಅವದೂತರು ವಿನಯ್​ ಗುರೂಜಿ ಸಿಎಂಗೆ ದರ್ಶನ ನೀಡಿಲ್ಲ. ಗುರುವಾರ ಮಾತ್ರ ಅವದೂತರ ದರ್ಶನಕ್ಕೆ ಅವಕಾಶ ಎಂದು ಆಶ್ರಮದ ಸಿಬ್ಬಂದಿ ಹೇಳಿದ್ದಾರೆ.

ಕೆಲ ದಿನಗಳ ಹಿಂದೆ ಯಡಿಯೂರಪ್ಪ, ಶೋಭಾ ಕರಂದ್ಲಾಜೆಗೂ ವಿನಯ್ ಗುರೂಜಿ ಅವರು ದರ್ಶನ ನಿರಾಕರಿಸಿದ್ದರು. ಕಳೆದ ಕೆಲ ದಿನಗಳ ಹಿಂದೆ ಸ್ಪೀಕರ್ ರಮೇಶ್ ಕುಮಾರ್, ದೇವೇಗೌಡ ಸೇರಿದಂತೆ ಹಲವು ನಾಯಕರು ಸ್ವಾಮೀಜಿಯನ್ನು ಭೇಟಿ ಮಾಡಿದ್ದರು.

Exit mobile version