Site icon PowerTV

ಸುಮಲತಾ ರೋಡ್​ ಶೋನಲ್ಲಿ ಹಾರಾಡಿತು ಜೆಡಿಎಸ್​​ ಬಾವುಟ..!

ಮಂಡ್ಯ: ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು, ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್​ ಅವರು ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ. ಮಂಡ್ಯದಲ್ಲಿ ಜೆಡಿಎಸ್​ಗೆ ಮತ್ತೊಂದು ಮರ್ಮಘಾತ ಎದುರಾಗಿದ್ದು, ಇಂದು ಸುಮಲತಾ ಅವರ ರೋಡ್​ ಶೋ ವೇಳೆ ಜೆಡಿಎಸ್​ ಬಾವುಟ ಹಾರಾಡಿದೆ. ಹನಿಯಂಬಾಡಿ ಗ್ರಾಮದಲ್ಲಿ ಜೆಡಿಎಸ್​ ಕಾರ್ಯಕರ್ತರಿಂದ್ಲೇ ಸುಮಲತಾ ಅವರಿಗೆ ಜೈಕಾರ ಹಾಕಿದ್ದಾರೆ. ಜೆಡಿಎಸ್ ಬಾವುಟ ಹಿಡಿದ ಜೆಡಿಎಸ್ ಕಾರ್ಯಕರ್ತರು ಸುಮಲತಾ ಪರ ಘೋಷಣೆ ಕೂಗಿದ್ದಾರೆ. ಕಾಂಗ್ರೆಸ್, ಬಿಜೆಪಿ, ರೈತಸಂಘಟನೆಗಳ ಬಾವುಟ ನಿತ್ಯ ಹಾರಾಡುತ್ತಿದ್ದು, ಇದೀಗ ಜೆಡಿಎಸ್ ಬಾವುಟವೂ ರೋಡ್​ ಶೋನಲ್ಲಿ ಕಾಣಿಸಿಕೊಂಡಿದೆ.

ಸುಮಲತಾ ಗೆಲುವಿಗಾಗಿ ನಟ ದೊಡ್ಡಣ್ಣ ಅವರು ದೇವರ ಮೊರೆ ಹೋಗಿದ್ದಾರೆ. ಮದ್ದೂರಿನ ಹೊಳೆ ಆಂಜನೇಯ ಸ್ವಾಮಿಗೆ ಹರಕೆ ಹೊತ್ತ ಹಿರಿಯ ನಟ ದೊಡ್ಡಣ್ಣ ಅವರು. ಒಂದು ಕಾಲು ರೂ. ಹರಕೆ ಹೊತ್ತಿದ್ದಾರೆ. ಆಂಜನೇಯ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಲಾಗಿದೆ.

Exit mobile version