Site icon PowerTV

ಸಿಎಂಗೆ ಪುಲ್ವಾಮಾ ದಾಳಿ ಬಗ್ಗೆ 2ವರ್ಷ ಹಿಂದೇನೇ ಗೊತ್ತಿತ್ತಂತೆ..!

ಚಿಕ್ಕಮಗಳೂರು: ಪುಲ್ವಾಮಾ ದಾಳಿ ಬಗ್ಗೆ ಎರಡು ವರ್ಷ ಹಿಂದೆಯೇ ನನಗೆ ಗೊತ್ತಿತ್ತು ಅಂತ ಸಿಎಂ ಹೆಚ್​. ಡಿ. ಕುಮಾರಸ್ವಾಮಿ ಅವರು ಚಿಕ್ಕಮಗಳೂರಿನಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಪುಲ್ವಾಮಾದಲ್ಲಿ ನಡೆದ ದಾಳಿಯ ಬಗ್ಗೆ ಮಾತನಾಡಿದ ಸಿಎಂ ಕುಮಾರಸ್ವಾಮಿ ಅವರು, “ನನಗೆ ಎರಡು ವರ್ಷದ ಹಿಂದೆಯೇ ದಾಳಿ ಬಗ್ಗೆ ಗೊತ್ತಿತ್ತು. ನಿವೃತ ಸೈನಿಕ ಅಧಿಕಾರಿಯೊಬ್ಬರು ನನಗೆ ಪುಲ್ವಾಮಾ ದಾಳಿ ಬಗ್ಗೆ ತಿಳಿಸಿದ್ರು. ಲೋಕಸಭಾ ಚುನಾವಣೆಗೆ ಮುನ್ನ ಭಾರತ-ಪಾಕ್ ನಡುವೆ ಸಂಘರ್ಷ ನಡೆಯುತ್ತೆ ಅಂತ ಹೇಳಿದ್ರು. ಆಮೇಲೆ ಪ್ರಧಾನಿ ಮೋದಿ ಅವರು ಏನಾದ್ರು ಕಥೆ ಸೃಷ್ಟಿ ಮಾಡಿ ಮತ ಕೇಳುತ್ತಾರೆ ಎಂದಿದ್ರು. ಇವತ್ತು ಅದೇ ರೀತಿಯಲ್ಲಿ ಆಗಿದೆ” ಅಂತ ಸಿಎಂ ಕುಮಾರಸ್ವಾಮಿ ಪುಲ್ವಾಮ ದಾಳಿಯ ಗುಟ್ಟು ಬಿಚ್ಚಿಟ್ಟಿದ್ದಾರೆ.

Exit mobile version