Site icon PowerTV

ಮಂಡ್ಯದಲ್ಲಿ ಮುಂದುವರಿದ ಸ್ಟಾರ್ ಪ್ರಚಾರ..!

ಮಂಡ್ಯ: ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು, ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಪ್ರಚಾರ ಭರದಿಂದ ಸಾಗಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಮೂರನೇ ದಿನವೂ ಮಂಡ್ಯದಲ್ಲಿ ಪ್ರಚಾರಕ್ಕೆ ಆಗಮಿಸಿದ್ದಾರೆ. ಪ್ರಚಾರಕ್ಕೆ ಆಗಮಿಸಿದ ದರ್ಶನ್ ಅವರಿಗೆ ಜನರು ಪುಷ್ಪವೃಷ್ಟಿಗೈದು ಸ್ವಾಗತ ಮಾಡಿದ್ದಾರೆ. ಹಾಗೆಯೇ ಅಭಿಮಾನಿಗಳು ದರ್ಶನ್​ಗೆ ಕ್ರೇನ್​ ಮೂಲಕ ಬೃಹತ್​ ಹೂವಿನ ಹಾರವನ್ನು ಹಾಕಿದ್ದಾರೆ. ತಂಡೇಕೆರೆಯಲ್ಲಿ ಪ್ರಚಾರಕ್ಕೆ ಆಗಮಿಸಿದ ದರ್ಶನ್​ಗೆ ಅಭಿಮಾನಿಗಳು ಜೈಘೋಷ ಮೊಳಗಿದ್ದು, ದರ್ಶನ್​ ಕೆಆರ್​​ ಪೇಟೆಯ ತಂಡೇಕೆರೆಯಿಂದ ಸುಮಲತಾ ಪರ ಪ್ರಚಾರ ಆರಂಭಿಸಿದ್ದಾರೆ.

ನಟ ಯಶ್ ಶ್ರೀರಂಗಪಟ್ಟಣದಿಂದ ಪ್ರಚಾರ ಆರಂಭಿಸಿದ್ದು, ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಪರ ಯಶ್​ ಮತಯಾಚನೆ ನಡೆಸುತ್ತಿದ್ದಾರೆ. ರಂಗನಾಥಸ್ವಾಮಿ ದೇವಸ್ಥಾನದಿಂದ ಯಶ್ ಪ್ರಚಾರ ಆರಂಭಿಸಿದ್ದಾರೆ. ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಶೆಟ್ಟಹಳ್ಳಿ ವ್ಯಾಪ್ತಿಯಲ್ಲಿ ಪ್ರಚಾರ ನಡೆಸುತ್ತಿದ್ದಾರೆ.

Exit mobile version