Site icon PowerTV

ಮೊದಲ ಪತ್ನಿ ಇದ್ರೂ 2ನೇ ಮದ್ವೆ ಆಗಿದ್ದಾರೆ: ಕುಮಾರಸ್ವಾಮಿ ವಿರುದ್ಧ ಮಾಧುಸ್ವಾಮಿ ವಾಗ್ದಾಳಿ

ತುಮಕೂರು: ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಚುನಾವಣಾ ಪ್ರಚಾರವೂ ಭರದಿಂದ ಸಾಗಿದೆ. ಹಾಗೇಯೇ ರಾಜಕೀಯ ಮುಖಂಡರ ಪರಸ್ಪರ ಕೆಸರೆರಚಾಟವೂ ಜೋರಾಗಿದೆ. ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ಜೆಸಿ ಪುರದಲ್ಲಿ ಬಿಜೆಪಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಬಿಜೆಪಿ ಶಾಸಕ ಜೆ.ಸಿ.ಮಾಧುಸ್ವಾಮಿ ಅವರು ಸಿಎಂ ಹೆಚ್​. ಡಿ. ಕುಮಾರಸ್ವಾಮಿ ಅವರನ್ನು ಟೀಕಿಸುವ ಭರದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. “ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗಲೇ ಮೊದಲ ಪತ್ನಿ ಇದ್ರೂ ಎರಡನೇ ಮದ್ವೆ ಆಗಿದ್ದಾರೆ. ಇವರು ನನ್ನ ನೈತಿಕತೆ ಬಗ್ಗೆ ಮಾತನಾಡ್ತಾರೆ. ಕೊನೆಗೆ ಆಯಮ್ಮನೇ ರಾಧಿಕಾ ಕುಮಾರಸ್ವಾಮಿ ಪ್ರೊಡಕ್ಷನ್ ಬೋರ್ಡ್ ಹಾಕ್ಕೊಂಡ್ರು” ಅಂತ ಹೇಳಿದ್ದಾರೆ.

Exit mobile version