Site icon PowerTV

ಶೂಟಿಂಗ್​ ವೇಳೆ ವಿನೋದ್ ಪ್ರಭಾಕರ್​​ಗೆ ಪೆಟ್ಟು

ಬೆಂಗಳೂರು: ಶೂಟಿಂಗ್ ಸೆಟ್​​ನಲ್ಲಿ ಫೈಟಿಂಗ್ ಸೀನ್​ ಚಿತ್ರೀಕರಣದ ಸಂದರ್ಭ ಅವಘಡ ಸಂಭವಿಸಿದೆ. ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರೋ ಟಿಂಬರ್ ಫ್ಯಾಕ್ಟರಿಯಲ್ಲಿ ಘಟನೆ ನಡೆದಿದ್ದು, ಶೂಟಿಂಗ್ ವೇಳೆ ನಟ ವಿನೋದ್ ಪ್ರಭಾಕರ್ ಕಾಲಿಗೆ ಪೆಟ್ಟು ಬಿದ್ದಿದೆ. ‘ವರ್ಧ’ ಸಿನಿಮಾ ಚಿತ್ರೀಕರಣ ವೇಳೆ ಘಟನೆ ನಡೆದಿದ್ದು, ನಟ ವಿನೋದ್ ಪ್ರಭಾಕರ್ ಕಾಲಿನ ಮೂಳೆ ಮುರಿದಿರೋ ಶಂಕೆ ವ್ಯಕ್ತವಾಗಿದೆ. ಅವರನ್ನು ಮಾಗಡಿ ರಸ್ತೆಯ ಆರ್ಥೋ ಕೇರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಉದಯ್ ಪ್ರಕಾಶ್ ನಿರ್ದೇಶನ ದ ‘ವರ್ಧ’ ಚಿತ್ರದ ಫೈಟ್​ ಸೀನ್ ಚಿತ್ರೀಕರಣ ನಡೆಯುತ್ತಿತ್ತು.

Exit mobile version