Site icon PowerTV

ಅಂಬಿ ಅಣ್ಣ ಇದ್ದಾಗ ಇವ್ರೆಲ್ಲಾ ಹೇಗಿದ್ರು ಅಂತ ಗೊತ್ತಿದೆ : ಯಶ್

ಮಂಡ್ಯ : ‘ಅಂಬಿ ಅಣ್ಣ ಇದ್ದಾಗ ಇವ್ರೆಲ್ಲಾ ಹೇಗಿದ್ರು ಅಂತ ಗೊತ್ತಿದೆ’ ಅಂತ ರಾಕಿಂಗ್​ ಸ್ಟಾರ್ ಯಶ್ ಮಂಡ್ಯ ರಣಕಣದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರ ಎದುರಾಳಿಗಳಿಗೆ ತಿರುಗೇಟು ನೀಡಿದ್ದಾರೆ.
ಸುಮಲತಾ ಅವರ ಪರ ಇಂದಿನಿಂದ ಪ್ರಚಾರ ಆರಂಭಿಸಿರುವ ಯಶ್, ‘ಸುಮಲತಾ ಗೌಡ್ತಿಯಲ್ಲ, ನಾಯ್ಡು’ ಅನ್ನೋ ಸಂಸದ ಶಿವರಾಮೇಗೌಡರ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯೆ ನೀಡಿದ್ರು.
ಮಂಡ್ಯದ ಕಿರಗಂದೂರಿನಲ್ಲಿ ಮಾತನಾಡಿದ ಅವರು, ‘ಮದುವೆ ಆದ್ಮೇಲೆ ನೀವು ಯಾರ ಮನೆಗೆ ಸೇರುತ್ತಿರಾ ಅಂತ ಹಳ್ಳಿಗಳಲ್ಲಿರುವ ಒಂದು ಹೆಣ್ಮಗಳನ್ನು ಕೇಳಿ ಹೇಳ್ತಾಳೆ’ ಎಂದರು.
‘ಯಾರೇ ಕೂಡ ವೈಯಕ್ತಿಕ ಟೀಕೆ ಮಾಡಿದ್ರೆ ಅದು ತಪ್ಪು . ಜಾತಿ ವಿಚಾರಕ್ಕೆ ಟೀಕೆ ಮಾಡೋದೂ ದೊಡ್ಡ ತಪ್ಪು. ಇಂತಹ ಕೀಳು ಮಟ್ಟಕ್ಕೆ ಯಾರೂ ಇಳಿಯಬಾರದು .ಈ ರೀತಿ ಹೇಳಿಕೆ ಕೊಡೋ ಎಲ್ಲರನ್ನೂ ನೋಡಿದ್ದೀವಿ. ಅಂಬಿ ಅಣ್ಣ ಇದ್ದಾಗ ಇವ್ರೆಲ್ಲ ಹೇಗೇಗೆ ಇದ್ರು ಅಂತ ಗೊತ್ತಿದೆ’ ಎಂದು ಖಡಕ್ ಉತ್ತರ ಕೊಟ್ರು.
ಸುಮಲತಾ ಅಕ್ಕನಿಗೆ ಎಲ್ಲಾ ಅವಕಾಶ ಇತ್ತು. ಅವರು ಬೇರೆಡೆ ಸ್ಪರ್ಧೆ ಮಾಡಬಹುದಿತ್ತು. ಅದನ್ನ ಬಿಟ್ಟು ಮಂಡ್ಯದಲ್ಲೇ ಸ್ಪರ್ಧೆ ಮಾಡ್ತಿದ್ದಾರೆ . ಒಂದು ಹೆಣ್ಣು ಇಷ್ಟೆಲ್ಲಾ ಹೋರಾಟ ಮಾಡ್ತಿದ್ದಾರೆ .ಇದಕ್ಕೆ ನಾವೆಲ್ಲರೂ ಕೂಡ ಬೆಂಬಲಿಸಬೇಕು. ಅದನ್ನು ಬಿಟ್ಟು ವೈಯಕ್ತಿಕ ಟೀಕೆ ಮಾಡೋದು ಸರಿಯಲ್ಲ. ಮಂಡ್ಯ ಮಹಿಳೆಯರು ವೋಟ್​ ಮೂಲಕ ಉತ್ತರ ನೀಡಿ ಎಂದು ಕರೆ ನೀಡಿದರು.
ಇನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ನಿನ್ನೆಯಿಂದ ಮಂಡ್ಯದಲ್ಲಿ ಸುಮಲತಾ ಪರ ಪ್ರಚಾರ ನಡೆಸುತ್ತಿದ್ದಾರೆ.

Exit mobile version