ಮಂಡ್ಯ : ‘ಅಂಬಿ ಅಣ್ಣ ಇದ್ದಾಗ ಇವ್ರೆಲ್ಲಾ ಹೇಗಿದ್ರು ಅಂತ ಗೊತ್ತಿದೆ’ ಅಂತ ರಾಕಿಂಗ್ ಸ್ಟಾರ್ ಯಶ್ ಮಂಡ್ಯ ರಣಕಣದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರ ಎದುರಾಳಿಗಳಿಗೆ ತಿರುಗೇಟು ನೀಡಿದ್ದಾರೆ.
ಸುಮಲತಾ ಅವರ ಪರ ಇಂದಿನಿಂದ ಪ್ರಚಾರ ಆರಂಭಿಸಿರುವ ಯಶ್, ‘ಸುಮಲತಾ ಗೌಡ್ತಿಯಲ್ಲ, ನಾಯ್ಡು’ ಅನ್ನೋ ಸಂಸದ ಶಿವರಾಮೇಗೌಡರ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯೆ ನೀಡಿದ್ರು.
ಮಂಡ್ಯದ ಕಿರಗಂದೂರಿನಲ್ಲಿ ಮಾತನಾಡಿದ ಅವರು, ‘ಮದುವೆ ಆದ್ಮೇಲೆ ನೀವು ಯಾರ ಮನೆಗೆ ಸೇರುತ್ತಿರಾ ಅಂತ ಹಳ್ಳಿಗಳಲ್ಲಿರುವ ಒಂದು ಹೆಣ್ಮಗಳನ್ನು ಕೇಳಿ ಹೇಳ್ತಾಳೆ’ ಎಂದರು.
‘ಯಾರೇ ಕೂಡ ವೈಯಕ್ತಿಕ ಟೀಕೆ ಮಾಡಿದ್ರೆ ಅದು ತಪ್ಪು . ಜಾತಿ ವಿಚಾರಕ್ಕೆ ಟೀಕೆ ಮಾಡೋದೂ ದೊಡ್ಡ ತಪ್ಪು. ಇಂತಹ ಕೀಳು ಮಟ್ಟಕ್ಕೆ ಯಾರೂ ಇಳಿಯಬಾರದು .ಈ ರೀತಿ ಹೇಳಿಕೆ ಕೊಡೋ ಎಲ್ಲರನ್ನೂ ನೋಡಿದ್ದೀವಿ. ಅಂಬಿ ಅಣ್ಣ ಇದ್ದಾಗ ಇವ್ರೆಲ್ಲ ಹೇಗೇಗೆ ಇದ್ರು ಅಂತ ಗೊತ್ತಿದೆ’ ಎಂದು ಖಡಕ್ ಉತ್ತರ ಕೊಟ್ರು.
ಸುಮಲತಾ ಅಕ್ಕನಿಗೆ ಎಲ್ಲಾ ಅವಕಾಶ ಇತ್ತು. ಅವರು ಬೇರೆಡೆ ಸ್ಪರ್ಧೆ ಮಾಡಬಹುದಿತ್ತು. ಅದನ್ನ ಬಿಟ್ಟು ಮಂಡ್ಯದಲ್ಲೇ ಸ್ಪರ್ಧೆ ಮಾಡ್ತಿದ್ದಾರೆ . ಒಂದು ಹೆಣ್ಣು ಇಷ್ಟೆಲ್ಲಾ ಹೋರಾಟ ಮಾಡ್ತಿದ್ದಾರೆ .ಇದಕ್ಕೆ ನಾವೆಲ್ಲರೂ ಕೂಡ ಬೆಂಬಲಿಸಬೇಕು. ಅದನ್ನು ಬಿಟ್ಟು ವೈಯಕ್ತಿಕ ಟೀಕೆ ಮಾಡೋದು ಸರಿಯಲ್ಲ. ಮಂಡ್ಯ ಮಹಿಳೆಯರು ವೋಟ್ ಮೂಲಕ ಉತ್ತರ ನೀಡಿ ಎಂದು ಕರೆ ನೀಡಿದರು.
ಇನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ನಿನ್ನೆಯಿಂದ ಮಂಡ್ಯದಲ್ಲಿ ಸುಮಲತಾ ಪರ ಪ್ರಚಾರ ನಡೆಸುತ್ತಿದ್ದಾರೆ.
ಅಂಬಿ ಅಣ್ಣ ಇದ್ದಾಗ ಇವ್ರೆಲ್ಲಾ ಹೇಗಿದ್ರು ಅಂತ ಗೊತ್ತಿದೆ : ಯಶ್
RELATED ARTICLES
Recent Comments
on ಈ ದೇವಸ್ಥಾನದಲ್ಲಿದೆ ನೇತಾಡುವ ಪಿಲ್ಲರ್! ಇಡೀ ವಿಶ್ವದಲ್ಲಿ ಎಲ್ಲಿ ಹುಡುಕಿದ್ರೂ ಇಂಥಾ ಪಿಲ್ಲರ್ ಬೇರೆಲ್ಲೂ ಕಾಣಲ್ಲ..!
on ಸರ್ಕಾರದ ಆದೇಶದನ್ವಯ ಮಾತ್ರ ಲಾಕ್ ಡೌನ್, ವಿಜಯಪುರ ಜಿಲ್ಲೆಯಲ್ಲಿ ಶನಿವಾರ ಲಾಕ್ ಡೌನ್ ಇಲ್ಲ – ಡಿಸಿ ವೈ.ಎಸ್ ಪಾಟೀಲ್

on ಭಾರತ ವಿರುದ್ಧ ಟೆಸ್ಟ್ ಪಂದ್ಯಕ್ಕೆ ಆಯ್ಕೆಯಾಗಿರುವ ವಿಂಡೀಸ್ನ ರಹಕೀಮ್ ಕಾರ್ನ್ವಾಲ್ರವರ ವಿಶೇಷತೆ ಗೊತ್ತಾ?
on Makar Sankranti 2024: ಮಕರ ಸಂಕ್ರಾಂತಿ ಹಬ್ಬದ ವಿಶೇಷತೆಗಳೇನು..? ಈ ದಿನ ಎಳ್ಳಿಗೆ ಯಾಕೆ ಮಹತ್ವ? ಇಲ್ಲಿದೆ ಮಾಹಿತಿ
on ‘ಅಭಿವಾ’ ಬೀಗರ ಔತಣದಲ್ಲಿ ಮುದ್ದೆ, ನಾಟಿ ಕೋಳಿ ಸಾರು, ಬೋಟಿ ಗೊಜ್ಜು, ; ಮೆನುನಲ್ಲಿ ಇನ್ನೂ ಏನೆಲ್ಲಾ ಇದೆ ಗೊತ್ತಾ..?
on ಕ್ಯಾಪ್ಟನ್ ಮಿಲ್ಲರ್ ವಿಮರ್ಶೆ: ಕ್ರಾಂತಿಕಾರಿ ಕಥೆಗೆ ಜೀವ ತುಂಬಿದ ಧನುಷ್; ಅತಿಥಿ ಪಾತ್ರದಲ್ಲಿ ಅಬ್ಬರಿಸಿದ ಶಿವಣ್ಣ
on ಜೆಡಿಎಸ್ ಅಂದ್ರೆ ‘ಜಸ್ಟ್ ಫಾರ್ ದೇವೇಗೌಡ & ಸನ್ಸ್ – ಸೋಶಿಯಲ್ ಮೀಡಿಯಾದಲ್ಲಿ ಗೋ ಬ್ಯಾಕ್ ನಿಖಿಲ್ ಕ್ಯಾಂಪೇನ್..!