Site icon PowerTV

ಸಿಎಂ ವಿರುದ್ಧ ನೀತಿ ಸಂಹಿತೆ ಉಲ್ಲಂಘನೆ ಆರೋಪ..!

ಬೆಂಗಳೂರು: ಸಿಎಂ ಹೆಚ್. ಡಿ. ಕುಮಾರಸ್ವಾಮಿ ವಿರುದ್ಧ ನೀತಿ ಸಂಹಿತೆ ಉಲ್ಲಂಘನೆ ಆರೋಪ ಕೇಳಿ ಬಂದಿದೆ. ತುಮಕೂರಿನಲ್ಲಿ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಸಿಎಂ ಅವರು ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ. ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುವ ಸಂದರ್ಭ ಹಲವು ಯೋಜನೆಗಳ ಘೋಷಣೆ ಮಾಡಿದ್ದಾರೆ. ಪ್ರಚಾರ ಭಾಷಣ ಮಾಡಿದ ಸಿಎಂ ಅವರು “ಚಿಕ್ಕನಾಯಕನಹಳ್ಳಿಯ ಕೆರೆ, ಕಟ್ಟೆ ತುಂಬಿಸುವ ಕೆಲಸ ಆಗಬೇಕಿದೆ. ಭದ್ರಾ ಮೇಲ್ದಂಡೆ ನೀರನ್ನು ಚಿಕ್ಕನಾಯಕನಹಳ್ಳಿಗೆ ಹರಿಸುತ್ತೇನೆ. ಸುಮಾರು 8ರಿಂದ 10 ತಿಂಗಳ ಕಾಲವಕಾಶ ಕೊಡಿ. ಒಣಗಿದ ತೆಂಗಿನಮರಕ್ಕೆ ಹೆಚ್ಚಿನ ಪರಿಹಾರ ನೀಡುತ್ತೇನೆ” ಅಂತ ಹೇಳಿದ್ದಾರೆ.

Exit mobile version