Site icon PowerTV

ಮೈಸೂರು ಅರಮನೆಗೆ ಭೇಟಿ ನೀಡಿದ ನಟ ಉಪೇಂದ್ರ

ಮೈಸೂರು: ರಿಯಲ್​ ಸ್ಟಾರ್​ ಉಪೇಂದ್ರ ಅವರು ಮೈಸೂರಿನ ಅರಮನೆಗೆ ಭೇಟಿ ನೀಡಿದ್ದಾರೆ. ಯದುವೀರ್​ ಒಡೆಯರ್​ ಅವರನ್ನು ಭೇಟಿ ಮಾಡಿ ಪತ್ರಕರ್ತರ ಜೊತೆ ಮಾತನಾಡಿದ ಅವರು, “ಮೈಸೂರಿನಲ್ಲಿ ಪ್ರಚಾರ ಆರಂಭಿಸೋ ಮುನ್ನ ಯದುವೀರ್​ ಒಡೆಯರ ಭೇಟಿಗೆ ಅವಕಾಶ ಕೇಳಿದ್ದೆ. ಹಾಗೆಯೇ ಅವರನ್ನು ಇಂದು ಭೇಟಿಯಾಗಿದ್ದೇನೆ. ಒಳ್ಳೆ ಕೆಲಸಕ್ಕೆ ಅರಮನೆ ಕಡೆಯಿಂದ ಬೆಂಬಲ ಕೊಡೋದಾಗಿ ಹೇಳಿ ಆಶಿರ್ವಾದ ಮಾಡಿದ್ರು” ಅಂತ ಹೇಳಿದ್ರು. ಇನ್ನು ಪ್ರಚಾರಕ್ಕೆ ಬರುವ ವಿಚಾರವಾಗಿ ಪ್ರತಿಕ್ರಿಯಿಸಿದ ಉಪೇಂದ್ರ ಅವರು, “ಪ್ರಚಾರಕ್ಕೆ ಬರುವಂತಹ ಯಾವುದೇ ವಿಚಾರವಿಲ್ಲ. ಇದೊಂದು ಕ್ಯಾಶುವಲ್ ಮೀಟ್” ಅಂತ ಹೇಳಿದ್ದಾರೆ.

ಲೋಕಸಭಾ ಚುನಾವಣೆ ಸಮೀಪದಲ್ಲಿದ್ದು, ಈ ಹಿನ್ನೆಲೆ ಅರಮನೆಗೆ ಭೇಟಿ ನೀಡಿರುವ ನಟ ಉಪೇಂದ್ರ ಅವರು ಯದುವೀರ್ ಒಡೆಯರ್ ಜೊತೆ ಚರ್ಚೆ ನಡೆಸಿದ್ದಾರೆ. ಈ ಸಂದರ್ಭ ಯುಪಿಪಿ ಅಭ್ಯರ್ಥಿಗಳಿಗೆ ಬೆಂಬಲ ನೀಡುವಂತೆ ಮನವಿ ಮಾಡಿದ್ದಾರೆ. ಇದಕ್ಕೂ ಮೊದಲು ಮೈಸೂರಿನ ಚಾಮುಂಡಿಬೆಟ್ಟಕ್ಕೆ ಉಪೇಂದ್ರ ಭೇಟಿ ನೀಡಿದ್ರು. ಮೈಸೂರು-ಕೊಡಗು ಕ್ಷೇತ್ರದ ಯುಪಿಪಿ ಅಭ್ಯರ್ಥಿ ಆಶಾರಾಣಿ ಜೊತೆ ದೇಗುಲಕ್ಕೆ ತೆರಳಿ ನಾಡದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ರು.

Exit mobile version