Site icon PowerTV

ಅಡ್ವಾಣಿಯಂತೆ ಯಡಿಯೂರಪ್ಪ ಅವರೂ ಮೂಲೆಗುಂಪಾಗ್ತಾರೆ: ಬೇಳೂರು

ಶಿವಮೊಗ್ಗ: ಯಡಿಯೂರಪ್ಪ ಅವರು, ಮೋದಿ ಹೆಸರಲ್ಲಿ ಮತ ಕೇಳುತ್ತಿರುವುದು ದುರಂತ. ಅಡ್ವಾಣಿ ಮೂಲೆಗುಂಪಾದಂತೆಯೇ ಯಡಿಯೂರಪ್ಪ ಅವರನ್ನೂ ಮೂಲೆಗುಂಪು ಮಾಡ್ತಾರೆ ಅಂತ ಕಾಂಗ್ರೆಸ್​ ಮುಖಂಡ ಬೇಳೂರು ಗೋಪಾಲಕೃಷ್ಣ ಅವರು ಹೇಳಿದ್ದಾರೆ.

ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಾಂಗ್ರೆಸ್​-ಜೆಡಿಎಸ್ ನಡುವಿನ ಗೊಂದಲಗಳ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. “ಡಿ.ಕೆ. ಶಿವಕುಮಾರ್ ಶಿವಮೊಗ್ಗಕ್ಕೆ ಬಂದ ಮೇಲೆ ಕಾಂಗ್ರೆಸ್ ಮತ್ತು ಜೆಡಿಎಸ್​ನ ನಡುವೆ ಸಣ್ಣ ಗೊಂದಲವೂ ಇಲ್ಲ. ಪಕ್ಷ‌ಮತ್ತು ಹೈಕಮಾಂಡ್ ಆದೇಶಕ್ಕೆ ಎಲ್ಲರೂ ಬದ್ಧರಾಗಿದ್ದೇವೆ. ಬಿಜೆಪಿಯಿಂದ ನಾವು ಹಿಂದುತ್ವದ ಪಾಠ ಕಲಿಯಬೇಕಿಲ್ಲ. ನಾವೂ ಕೂಡ ಹಿಂದುಗಳೆ. ಚುನಾವಣೆ ಬಳಿಕ ಯಡಿಯೂರಪ್ಪ ಅಧ್ಯಕ್ಷರಾಗಿ ಇರುವುದಿಲ್ಲ ಎಂದು ಸದಾನಂದ ಗೌಡರೇ ಹೇಳಿಕೆ ನೀಡಿದ್ದಾರೆ ಎಂದರು.

“ನಿಖಿಲ್ ಕುಮಾರ್ ಸ್ವಾಮಿ ಆಸ್ತಿ 9 ಕೋಟಿ ಎಂದು ಬಿಜೆಪಿಯವರು ಟೀಕಿಸುತ್ತಾರೆ. ಆದರೆ, ಬಿಜೆಪಿ ಶಿವಮೊಗ್ಗ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಆಸ್ತಿ ಕಳೆದ ಐದು ತಿಂಗಳಲ್ಲಿ 12 ಕೋಟಿ ಹೆಚ್ಚಾಗಿದೆ. ಈ ಆದಾಯ ಎಲ್ಲಿಂದ ಬಂತು ಎಂದು ಪ್ರಶ್ನಿಸಿದ್ದಾರೆ. “ಯಡಿಯೂರಪ್ಪ ಹಾಗೂ ಶೋಭಾಕರಂದ್ಲಾಜೆ ಬಳಿ‌ಹಣವಿಲ್ಲವೇ. ಅವರ ಮೇಲೆ ಐಟಿ ದಾಳ ನಡೆಸಿ. ಯಡಿಯೂರಪ್ಪ ಕುಟುಂಬಕ್ಕೆ ಸಂಬಂಧಿಸಿದ ಸಿಡಿ ಹರತಾಳು ಹಾಲಪ್ಪ ಹಾಗೂ ಕೆ.ಎಸ್.ಈಶ್ವರಪ್ಪ ಪಿಎ ಬಳಿ ಇದೆ. ಇದೇ ಕಾರಣದಿಂದ ಕಳೆದ ಬಾರಿ ರಾಘವೇಂದ್ರ ಹಾಗೂ ವಿಜಯೇಂದ್ರ ಅವರಿಗೆ ಬ್ಲಾಕ್ ಮೇಲ್ ಮಾಡಿ ಸಾಗರ ಕ್ಷೇತ್ರದಲ್ಲಿ ಹಾಲಪ್ಪ ಟಿಕೆಟ್ ಪಡೆದಿದ್ದಾರೆ. ಈ ವಿಚಾರವನ್ನು ಸಾಗರದಲ್ಲಿ ನಡೆದ ಸಭೆಯಲ್ಲಿ ವಿಜಯೇಂದ್ರ ಅವರು ಪರೋಕ್ಷವಾಗಿ ಹೇಳಿದ್ದಾರೆ” ಅಂತ ಹೇಳಿದ್ದಾರೆ.

Exit mobile version