Site icon PowerTV

ಯಡಿಯೂರಪ್ಪ, ಶೋಭಾ ವಾಮಾಚಾರ ಮಾಡಿಸಿದ್ದಾರೆ: ಬೇಳೂರು

ಶಿವಮೊಗ್ಗ: ಯಡಿಯೂರಪ್ಪ‌ ಹಾಗೂ ಶೋಭ ಕರಂದ್ಲಾಜೆಯವರು, ನನಗೆ ವಾಮಾಚಾರ ಮಾಡಿಸಿರಬೇಕು ಅಂತ ಶಿವಮೊಗ್ಗದಲ್ಲಿ ಕಾಂಗ್ರೆಸ್​ ಮುಖಂಡ ಬೇಳೂರು ಗೋಪಾಲಕೃಷ್ಣ ಶಂಕೆ ವ್ಯಕ್ತಪಡಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ” ಯಡಿಯೂರಪ್ಪ‌, ಶೋಭ ಕರಂದ್ಲಾಜೆಯವರು ನನಗೆ ವಾಮಾಚಾರ ಮಾಡಿಸಿರಬೇಕು. ಹೀಗಾಗಿ ಕಳೆದ ಎರಡು ತಿಂಗಳಿನಿಂದ ನಾನು ಮಂಕಾಗಿದ್ದೆನೆ. ಕಳೆದೆರಡು ತಿಂಗಳಿನಿಂದ ಎಲ್ಲೂ ಬರಲು ಆಗುತ್ತಿಲ್ಲ. ಆದರೆ, ನಾನು ವಾಮಾಚಾರ ತೆಗೆಸಲು ಹೋಗಿಲ್ಲ. ಕೇವಲ ನಾನು ದೇವಾಲಯಕ್ಕೆ ಹೋಗಿ, ನಮಸ್ಕರಿಸಿ ಬಂದಿದ್ದೆನೆ” ಅಂತ ಹೇಳಿದ್ದಾರೆ.

Exit mobile version