Site icon PowerTV

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಸುಮಲತಾ ಭೇಟಿ

ಧರ್ಮಸ್ಥಳ: ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರು ಧರ್ಮಸ್ಥಳಕ್ಕೆ ಶ್ರೀ ಮಂಜುನಾಥ ದೇವಸ್ಥಾನಕ್ಕೆ ಭೇಟಿ ನೀಡಿದರು. ಪುತ್ರ ಅಭಿಷೇಕ್ ಜೊತೆ ಮಂಜುನಾಥ ಸ್ವಾಮಿಗೆ ವಿಶೇಷ ಪೊಜೆ ಸಲ್ಲಿಸಿದರು. ಸುಮಲತಾಗೆ ನಿರ್ಮಾಪಕ ರಾಕ್​ಲೈನ್​ ವೆಂಕಟೇಶ್​ ಸೇರಿ ಹಲವರು ಸಾಥ್​ ನೀಡಿದರು. ​​ನಂತರ ಮಾತನಾಡಿದ ಸುಮಲತಾ ಅವರು ಶಿವರಾಮೇಗೌಡ ಅವರ ವಿರುದ್ಧ ವಾಗ್ದಾಳಿ ನಡೆಸಿದರು. ಶಿವರಾಮೇಗೌಡ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, “ಬೆಲೆ ಇಲ್ಲದಿರೋ ಇಂಥ ಮಾತುಗಳಿಗೆ ನಾನು ಪ್ರತಿಕ್ರಿಯೆ ನೀಡಲ್ಲ. ಅದು ನಮ್ಮ ಸಂಸ್ಕಾರಾನೂ. ನಾನು ಮೊದಲಿನಿಂದಲೂ ಹೇಳೀಕೊಂಡು ಬಂದಿರುವಂತೆ ಇದಕ್ಕೆಲ್ಲಾ ಜ‌ನ ಉತ್ತರ ಕೊಡ್ತಾರೆ ಅಂತ ಹೇಳಿದ್ರು.

Exit mobile version