Site icon PowerTV

ನಿಖಿಲ್​ಗೆ ಎದುರಾಯ್ತು ಮತ್ತೊಂದು ಸಂಕಷ್ಟ..!

ಮಂಡ್ಯ: ನಿಖಿಲ್​ ನಾಮಪತ್ರ ತಿರಸ್ಕರಿಸಲು ಮುಖ್ಯ ಚುನಾವಣಾ ಅಧಿಕಾರಿಗೆ ದೂರು ಸಲ್ಲಿಸಲಾಗಿದೆ. ಮತದಾರರ ಪಟ್ಟಿಗೂ, ನಾಮಪತ್ರದಲ್ಲೂ ನಮೂದಿಸಲಾಗಿರುವ ನಿಖಿಲ್ ಕುಮಾರಸ್ವಾಮಿ ಹೆಸರಿನಲ್ಲಿ ಹೊಂದಾಣಿಕೆಯಿಲ್ಲ ಎಂದು ಸಾಮಾಜಿಕ ಹೋರಾಟಗಾರ ಬಿ. ಎಸ್​​. ಗೌಡ ಅವರು ಮುಖ್ಯ ಚುನಾವಣಾಧಿಕಾರಿಗೆ ದೂರು ನೀಡಿದ್ದಾರೆ. ಮತದಾರರ ಪಟ್ಟಿಯಲ್ಲಿ ‘ನಿಖಿಲ್ ಕುಮಾರಸ್ವಾಮಿ’ ಎಂದು ಬರೆಯಲಾಗಿದ್ದು, ನಾಮಪತ್ರ ಸಲ್ಲಿಕೆ ಅಫಿಡೆವಿಟ್​ನಲ್ಲಿ ‘ನಿಖಿಲ್ ಕೆ.’ ಎಂದು ಬರೆಯಲಾಗಿದೆ.

ಈ ಸಂಬಂಧ ಚೀಫ್​ ಎಲೆಕ್ಷನ್​ ಆಫೀಸರ್​​ಗೆ ದೂರು ಸಲ್ಲಿಸಲಾಗಿದ್ದು, ಮಂಡ್ಯ ಚುನಾವಣಾ ಅಧಿಕಾರಿ ಆಗಿರುವ ಡಿಸಿ ವರ್ಗಾವಣೆಗೂ ಒತ್ತಾಯಿಸಿದ್ದಾರೆ. ಮತಪಟ್ಟಿ ರಾಮನಗರ ತಾಲೂಕಿನ ಕೇತೋಗಾನಹಳ್ಳಿಯಲ್ಲಿದ್ದು, ನಿಖಿಲ್ ನಾಮಪತ್ರ ಅಸಿಂಧುಗೊಳಿಸುವಂತೆ ಮನವಿ ಮಾಡಲಾಗಿದೆ. ಚುನಾವಣಾಧಿಕಾರಿ ವಿರುದ್ಧ ಸಾಕಷ್ಟು ಆರೋಪ ಕೇಳಿ ಬಂದಿದ್ದು, ಚುನಾವಣಾಧಿಕಾರಿ ವಿರುದ್ಧವೂ ದೂರು ಸಲ್ಲಿಸಲಾಗಿದೆ. ಆರೋಪ ಬಂದ ತಕ್ಷಣ ಅಧಿಕಾರಿಗಳ ವರ್ಗಾವಣೆ ಮಾಡೋದು ಸಹಜ. ಹೀಗಾಗಿ ಚುನಾವಣಾಧಿಕಾರಿ ವರ್ಗಾವಣೆ ಮಾಡಬೇಕೆಂದು ಬಿ. ಎಸ್​ ಗೌಡ ಅವರು ಆಗ್ರಹಿಸಿದ್ದಾರೆ.

Exit mobile version