Site icon PowerTV

ಮಂಡ್ಯ ರಣಕಣದಲ್ಲಿ ಸ್ಟಾರ್​ ರಂಗು – ಸುಮಲತಾ ಪರ ದರ್ಶನ್ ಪ್ರಚಾರ

ಮಂಡ್ಯ: ಇಂದಿನಿಂದ ಮಂಡ್ಯ ರಣಕಣ ಮತ್ತಷ್ಟು ರಂಗೇರಲಿದೆ. ಸುಮಲತಾ ಅಂಬರೀಶ್​ ಪರ ಚಾಲೆಂಜಿಂಗ್ ಸ್ಟಾರ್​ ದರ್ಶನ್​  ಪ್ರಚಾರ ಮಾಡಲಿದ್ದಾರೆ. ಸುಮಲತಾ ನಾಮಪತ್ರ ಸಲ್ಲಿಕೆ ನಂತ್ರ ಶೂಟಿಂಗ್‌ನಲ್ಲಿ ಬ್ಯುಸಿ ಆಗಿದ್ದ ದರ್ಶನ್‌ ಇವತ್ತಿನಿಂದ ಮಂಡ್ಯ ಅಖಾಡಕ್ಕೆ ಎಂಟ್ರಿ ಕೊಡಲಿದ್ದಾರೆ. ಸುಮಲತಾ ಅಂಬರೀಶ್‌ ಪರ ಭರ್ಜರಿ ಕ್ಯಾಂಪೇನ್‌ ನಡೆಸಲಿರುವ ಚಾಲೆಂಜಿಂಗ್‌ ಸ್ಟಾರ್‌, ಇಷ್ಟು ದಿನ ತಮ್ಮ ವಿರುದ್ಧ ಕೇಳಿ ಬಂದ ಎಲ್ಲ ಪ್ರಶ್ನೆಗಳಿಗೆ ಉತ್ತರ‌ ಕೊಡ್ತಾರಾ ಅನ್ನೋದೂ ಸಹ ಸಾಕಷ್ಟು ಕೂತೂಹಲ ಕೆರಳಿಸಿದೆ.

ಮಂಡ್ಯ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಸುಮಲತಾ ಅವರು ಈಗಾಗಲೇ ಪ್ರಚಾರ ಆರಂಭಿಸಿದ್ದಾರೆ. ಸಿಎಂ ಕುಮಾರಸ್ವಾಮಿ ಅವರ ಪುತ್ರ, ಮೈತ್ರಿ ಅಭ್ಯರ್ಥಿ ನಿಖಿಲ್​ ಕುಮಾರಸ್ವಾಮಿ ಅವರೂ ಈಗಾಗಲೇ ಪ್ರಚಾರ ಆರಂಭಿಸಿದ್ದಾರೆ. ಈಗಾಗಲೇ ಸಾಕಷ್ಟು ಟೀಕೆಗಳನ್ನು ಎದುರಿಸಿರುವ ನಟ ದರ್ಶನ್ ಇಂದು ಪೂರ್ಣ ಪ್ರಮಾಣದಲ್ಲಿ ಸುಮಲತಾ ಪರ ಪ್ರಚಾರ ನಡೆಸಲಿದ್ದಾರೆ. ನಾಳೆ ನಟ ಯಶ್​ ಅವರು ಸುಮಲತಾ ಪರ ಪ್ರಚಾರ ನಡೆಸಲಿದ್ದಾರೆ.

Exit mobile version