Site icon PowerTV

ಬೇರೆಯವರ ಮಾತಿಗೆ ನಿಮ್ಮ ಮತ ಉತ್ತರ ಆಗ್ಬೇಕು : ನಟ ದರ್ಶನ್​ ಕರೆ

ಮಂಡ್ಯ : ಬೇರೆಯವರ ಮಾತಿಗೆ ನಾವು ಎದುರಾಗಿ ಮಾತಾಡೋದು ಬೇಡ. ಅವರ ಮಾತಿಗೆ ನಿಮ್ಮ ಮತ ಉತ್ತರ ಆಗಬೇಕು ಅಂತ ಚಾಲೆಂಜಿಂಗ್ ಸ್ಟಾರ್ ದರ್ಶನ್​ ತನ್ನ ಅಭಿಮಾನಿಗಳಿಗೆ ಕರೆ ನೀಡಿದರು.
ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರ ಪರ ಪ್ರಚಾರ ನಡೆಸುತ್ತಿರುವ ದರ್ಶನ್, ಸುಮಲತಾ ಅವರ ಗೆಲುವೇ ಎದುರಾಳಿಗಳಿಗೆ ಉತ್ತರ ಆಗಬೇಕು ಎಂದರು.
‘ಎಲ್ಲರೂ ನೋಡ್ತಾ ಇದ್ದೀರಿ. ಇಲ್ಲಿ ನಿಂತ್ಕೊಂಡು ನಾವು ಯಾರ ಬಗ್ಗೆಯೂ ಏನೂ ಮಾತನಾಡಲ್ಲ. ಎಲ್ಲರೂ ಮಾತಾಡ್ತಾ ಇದ್ದಾರೆ..! ಮಾತಾಡ್ಲಿ. ನೀವು ಕೊಡೋ ಒಂದು ಓಟು, ಬರೋ ಫಲಿತಾಂಶ ಉತ್ತರ ಆಗ್ಬೇಕು’ ಎಂದು ಹೇಳಿದರು.
ಅಪ್ಪಾಜಿ (ಅಂಬರೀಶ್) ಮಾಡಬೇಕೆಂದಿದ್ದ ಕೆಲಸಗಳನ್ನು ಪೂರ್ಣಗೊಳಿಸುವ ಉದ್ದೇಶದಿಂದ ಸುಮಲತಾ ಅವರು ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಅವರಿಗೆ ಅಧಿಕಾರದಾಸೆ ಇಲ್ಲ. ಅದು ಬೇಡವೂ ಬೇಡ. ಅಪ್ಪಾಜಿ ಕಾವೇರಿ ವಿಷಯದಲ್ಲಿ ರಾಜೀನಾಮೆ ನೀಡಿ ಬಂದವರು ಎಂದರು.
ಇದೇ 18ನೇ ತಾರೀಖು ಲೋಕಸಭಾ ಚುನಾವಣೆ ಇದೆ. ಕ್ರಮ ಸಂಖ್ಯೆ 20, ನೆನಪಿಟ್ಟುಕೊಂಡು ಸುಮಲತಾ ಅವರಿಗೆ ವೋಟ್​ ಮಾಡಿ ಎಂದು ಮತ ಯಾಚನೆ ಮಾಡಿದರು.
ದರ್ಶನ್ ಇಂದಿನಿಂದ ಪ್ರಚಾರ ಆರಂಭಿಸಿದ್ದಾರೆ. ನಾಳೆ ರಾಕಿಂಗ್ ಸ್ಟಾರ್ ಯಶ್ ಕೂಡ ಪ್ರಚಾರಕ್ಕಿಳಿಯಲಿದ್ದಾರೆ.

Exit mobile version