Site icon PowerTV

ಮೋದಿ ಸರ್ಕಾರ 5 ವರ್ಷಗಳಲ್ಲಿ ಶ್ರೀಮಂತರನ್ನಷ್ಟೇ ಬೆಳೆಸಿದೆ : ರಾಹುಲ್ ಗಾಂಧಿ

ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕಳೆದ 5 ವರ್ಷಗಳಲ್ಲಿ ಕೇವಲ ಶ್ರೀಮಂತರನ್ನಷ್ಟೇ ಬೆಳೆಸಿದೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು.
ರಾಜ್ಯದಲ್ಲಿ ಚುನಾವಣೆಗೆ ಮೈತ್ರಿಯಾಗಿ ಹೋಗ್ತಿದ್ದೇವೆ. ಎರಡೂ ಪಕ್ಷಗಳ ಕಾರ್ಯಕರ್ತರು ಒಟ್ಟಾಗಿ ಹೋಗಬೇಕು. ಮೈತ್ರಿ ಅಭ್ಯರ್ಥಿ ಗೆಲ್ಲಿಸಿಕೊಳ್ಳಲು ಕೆಲಸ ಮಾಡಬೇಕು. ದೇಶ ರೈತರು,ದುಡಿಯುವ ವರ್ಗಕ್ಕೆ ಸೇರಿದ್ದು. ರೈತರು,ಬಡವರೇ ಹೆಚ್ಚಾಗಿರುವ ದೇಶವಿದು. ದೇಶವನ್ನ ಒಡೆಯಲು ಹಲವು ಕುತಂತ್ರ ನಡೆಸುತ್ತಿದ್ದಾರೆ. ಮೋದಿ ಸರ್ಕಾರ ಯಾರ ಪರ ಕಾರ್ಯಕ್ರಮ ನೀಡಲಿಲ್ಲ. ಐದು ವರ್ಷದಲ್ಲಿ ಶ್ರೀಮಂತರನ್ನಷ್ಟೇ ಬೆಳೆಸಿದ್ರು ಎಂದು ಹರಿಹಾಯ್ದರು.
ಮಧ್ಯಪ್ರದೇಶ,,ಛತ್ತೀಸ್ ಘಡ,ರಾಜಸ್ಥಾನದಲ್ಲಿ ಸಾಲಮನ್ನಾ ಆಗಿದೆ. ಅಲ್ಲಿನ ನಮ್ಮ ಸರ್ಕಾರ ಸಾಲಮನ್ನಾ ಮಾಡಿದೆ. ಅನಿಲ್ ಅಂಬಾನಿ, ಮಲ್ಯ,ನೀರವ್​​ಗೆ ಮೋದಿ ಸಹಾಯ ಮಾಡ್ತಾರೆ. ದೇಶವನ್ನ ಕೊಳ್ಳೆ ಹೊಡೆದು ಹೋಗಲು ಸಹಾಯ ಮಾಡ್ತಾರೆ. ಯಡಿಯೂರಪ್ಪನವರ ಡೈರಿ ಕಥೆ ಏನಾಯ್ತು.? 150 ಕೋಟಿ ಹಣ ಯಾರಿಗೆ ಕೊಟ್ರು? ಎಂದು ಪ್ರಶ್ನಿಸಿದರು.
ಮೋದಿ ನೋಟ್ ಬ್ಯಾನ್ ಮಾಡಿ ಹಣ ಕಿತ್ತುಕೊಂಡ್ರು. ಬ್ಯಾಂಕುಗಳ ಮುಂದೆ ಕ್ಯೂ ನಿಲ್ಲುವಂತೆ ಮಾಡಿದ್ರು. ಗಬ್ಬರ್ ಸಿಂಗ್ ಟ್ಯಾಕ್ಸ್ ತಂದು ಸಮಸ್ಯೆ ಸೃಷ್ಠಿಸಿದ್ದಾರೆ. ಐದು ರೀತಿಯ ಟ್ಯಾಕ್ಸ್ ತಂದಿದ್ದಾರೆ. ಪೆಟ್ರೋಲ್,ಡಿಸೇಲ್ ಬೆಲೆ ಏರಿಕೆಯಾಗುತ್ತಿದೆ. 2019ಕ್ಕೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಜಿಎಸ್ ಟಿ ತೆಗೆದುಹಾಕ್ತೇವೆ. ನಾವು ಒಂದೇ ತೆರಿಗೆ, ಕಡಿಮೆ ಮೌಲ್ಯ ಜಾರಿಗೆ ತರ್ತೇವೆ ಎಂದರು.

Exit mobile version