Site icon PowerTV

ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡುಗುವವರಿಗೆ ವೇಣುಗೋಪಾಲ್​ ವಾರ್ನಿಂಗ್​

ಬೆಂಗಳೂರು: ಲೋಕಸಮರಕ್ಕೆ ಕಾಂಗ್ರೆಸ್​ ರಣತಂತ್ರ ರೂಪಿಸುತ್ತಿದ್ದು ತಡರಾತ್ರಿಯವರೆಗೂ ಕೆಪಿಸಿಸಿ ಕಚೇರಿಯಲ್ಲಿ ‘ಕೈ’ ನಾಯಕರ ಸಭೆ ನಡೆದಿದೆ. ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗುವವರಿಗೆ ಕಾಂಗ್ರೆಸ್​ ನಾಯಕರು ವಾರ್ನ್​ ಮಾಡಿದ್ದಾರೆ. ರಾಜ್ಯ ಕಾಂಗ್ರೆಸ್​ ಉಸ್ತುವಾರಿ ಕೆ.ಸಿ ವೇಣುಗೋಪಾಲ್​ ಅವರು ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗುವವರಿಗೆ ಖಡಕ್ ವಾರ್ನಿಂಗ್​ ಮಾಡಿದ್ದು, “ಯಾರೇ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ರೂ ಸಹಿಸಲ್ಲ. ಬಿಜೆಪಿಗೆ ಮರೆಯಲ್ಲೇ ಸಹಾಯ ಮಾಡುವ ಕಾರ್ಯಕರ್ತರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತೆ ಅಂತ ಹೇಳಿದ್ದಾರೆ. “ಆ ಬಗ್ಗೆ ಈಗಾಗಲೇ ಎರಡು ಪಕ್ಷ ನಾಯಕರು ತೀರ್ಮಾನ ಮಾಡಿದ್ದೇವೆ. ಯಾರೇ ಪಕ್ಷ ವಿರೋಧಿ ಚಟುವಟಿಕೆ ಮಾಡಿದರೂ ಅವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳುತ್ತೇವೆ” ಅಂತ ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಭೆ ಬಳಿಕ ಕೆ.ಸಿ. ವೇಣುಗೋಪಾಲ್ ಹೇಳಿದ್ದಾರೆ.

Exit mobile version