Site icon PowerTV

ಸಂಗಣ್ಣ ಕರಡಿಗೆ ಕೊನೆಗೂ ಸಿಕ್ತು ಟಿಕೆಟ್ – ಇಲ್ಲಿದೆ ರಾಜ್ಯದ ಬಿಜೆಪಿ ‘ರಣಕಲಿ’ಗಳ ಸಂಪೂರ್ಣ ಪಟ್ಟಿ

ಬೆಂಗಳೂರು: ಬಾಕಿ ಉಳಿದ ಮೂರು ಲೋಕಸಭಾ ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಲಾಗಿದೆ. ಕೊಪ್ಪಳದಲ್ಲಿ ಸಂಸದ ಸಂಗಣ್ಣ ಕರಡಿ ಮತ್ತೆ ಟಿಕೆಟ್‌ ಗಿಟ್ಟಿಸಿದ್ದು, ಚಿಕ್ಕೋಡಿಯಲ್ಲಿ ಅಣ್ಣಾ ಸಾಹೇಬ್‌ ಜೊಲ್ಲೆಗೆ ಬಿಜೆಪಿ ಮಣೆ ಹಾಕಿದೆ. ಚಿಕ್ಕೋಡಿಯಲ್ಲಿ ಬಿಜೆಪಿ ಟಿಕೆಟ್‌ ಪಡೆಯಲು ಭಾರೀ ಕಸರತ್ತು ನಡೆಸಿದ್ದ ಶಾಸಕ ಉಮೇಶ್‌ ಕತ್ತಿ ಅವರ ಸಹೋದರ ರಮೇಶ್‌ ಕತ್ತಿ ಅವರಿಗೆ ಟಿಕೆಟ್‌ ನಿರಾಕರಿಸಲಾಗಿದೆ. ರಾಯಚೂರಿನಲ್ಲಿ ರಾಜಾ ಅಮರೇಶ್ ನಾಯಕ್‌ಗೆ ಬಿಜೆಪಿ ಟಿಕೆಟ್‌ ನೀಡಿದ್ದು, ರಾಜ್ಯದ 27 ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳ ಹೆಸರು ಫೈನಲ್ ಆಗಿದೆ. ಕೊಪ್ಪಳದಲ್ಲಿ ಸಂಗಣ್ಣ ಕರಡಿ ಅವರು ಟಿಕೆಟ್‌ ಸಿಗುತ್ತೋ ಇಲ್ವೋ ಅಂತಾ ಪರದಾಡಿದ್ದರು. ಇದೀಗ ಕೊನೆಗೂ ಸಂಗಣ್ಣ ಅವರಿಗೆ ಟಿಕೆಟ್ ಲಭಿಸಿದೆ. ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರಿಗೆ ಬಿಜೆಪಿ ಬೆಂಬಲ ಘೋಷಿಸಿದೆ.

ಬೆಂಗಳೂರು ಉತ್ತರ : ಡಿ.ವಿ.ಸದಾನಂದ ಗೌಡ

ಬೆಂಗಳೂರು ಕೇಂದ್ರ : ಪಿ.ಸಿ. ಮೋಹನ್

ತುಮಕೂರು : ಜಿ.ಎಸ್.ಬಸವರಾಜ್

ಉಡುಪಿ-ಚಿಕ್ಕಮಗಳೂರು : ಶೋಭಾ ಕರಂದ್ಲಾಜೆ

ಚಿಕ್ಕಬಳ್ಳಾಪುರ : ಬಿ.ಎನ್. ಬಚ್ಚೇಗೌಡ

ಬೀದರ್ : ಭಗವಂತ್​ ಖೂಬಾ

ಹಾವೇರಿ : ಶಿವಕುಮಾರ್‌ ಉದಾಸಿ

ಬಾಗಲಕೋಟೆ : ಪಿ.ಸಿ.ಗದ್ದೀಗೌಡರ್

ಬೆಳಗಾವಿ : ಸುರೇಶ್ ಅಂಗಡಿ

ದಕ್ಷಿಣ ಕನ್ನಡ : ನಳಿನ್ ಕುಮಾರ್ ಕಟೀಲ್

ಮೈಸೂರು-ಕೊಡಗು: ಪ್ರತಾಪ್ ಸಿಂಹ

ಕಲಬುರಗಿ: ಡಾ. ಉಮೇಶ್ ಜಾಧವ್

ವಿಜಯಪುರ: ರಮೇಶ್ ಜಿಗಜಿಣಗಿ

ಶಿವಮೊಗ್ಗ: ಬಿ.ವೈ.ರಾಘವೇಂದ್ರ

ಧಾರವಾಡ: ಪ್ರಹ್ಲಾದ್ ಜೋಶಿ

ಬಳ್ಳಾರಿ: ದೇವೇಂದ್ರಪ್ಪ

ದಾವಣಗೆರೆ: ಜಿ.ಎಂ. ಸಿದ್ದೇಶ್ವರ್​

ಚಿತ್ರದುರ್ಗ: ನಾರಾಯಣಸ್ವಾಮಿ

ಹಾಸನ: ಎ.ಮಂಜು

ಚಾಮರಾಜನಗರ: ಶ್ರೀನಿವಾಸ್ ಪ್ರಸಾದ್

ಉತ್ತರ ಕನ್ನಡ: ಅನಂತ್​ಕುಮಾರ್ ಹೆಗಡೆ

ಬೆಂಗಳೂರು ದಕ್ಷಿಣ: ತೇಜಸ್ವಿ ಸೂರ್ಯ

ಬೆಂಗಳೂರು ಗ್ರಾಮಾಂತರ: ಅಶ್ವಥ್ ನಾರಾಯಣ್​

ರಾಯಚೂರು: ರಾಜಾ ಅಮರೇಶ್ ನಾಯಕ್‌

ಚಿಕ್ಕೋಡಿ: ಅಣ್ಣಾ ಸಾಹೇಬ್ ಜೊಲ್ಲೆ

ಕೋಲಾರ: ಮುನಿಸ್ವಾಮಿ

ಕೊಪ್ಪಳ: ಸಂಗಣ್ಣ ಕರಡಿ 

Exit mobile version