Site icon PowerTV

ಯಾರನ್ನೋ ಮದ್ವೆಯಾಗಿ ಮಂಡ್ಯದವನಾಗಬೇಕಿಲ್ಲ : ಅಭಿಷೇಕ್​ ಅಂಬರೀಶ್

ಮಂಡ್ಯ : ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಜೊತೆಗೆ ಅಭ್ಯರ್ಥಿಗಳ ಪ್ರಚಾರ ಕೂಡ ಜೋರಾಗಿಯೇ ನಡೆಯುತ್ತಿದೆ. ರಾಜಕೀಯ ಕೆಸರೆರೆಚಾಟ, ವಾಗ್ದಾಳಿ ಹೆಚ್ಚಾಗುತ್ತಿದೆ.
ಮಂಡ್ಯ ‘ರಣಕಣ’ವಂತೂ ತುಂಬಾನೇ ಕಾವೇರಿದೆ. ಪಕ್ಷೇತರ ಅಭ್ಯರ್ಥಿ ಸುಮಲತಾ ಅವರ ಪುತ್ರ ಅಭಿಷೇಕ್ ಅವರು ತನ್ನ ತಂದೆ ದಿ.ಅಂಬರೀಶ್​ ಅವರ ಸ್ಟೈಲ್​ನಲ್ಲಿ ಎದುರಾಳಿಗಳಿಗೆ ಛಾಟಿ ಬೀಸುತ್ತಿದ್ದಾರೆ.
ಇಂದು ಪ್ರಚಾರದ ವೇಳೆ ಮಾತನಾಡಿದ ಅಭಿಷೇಕ್ ಅಂಬರೀಶ್, ಯಾರನ್ನೋ ಮದ್ವೆಯಾಗಿ ಮಂಡ್ಯದವನಾಗಬೇಕಿಲ್ಲ ಎಂದು ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಮತ್ತು ಮೈತ್ರಿ ನಾಯಕರನ್ನು ಲೇವಡಿ ಮಾಡಿದರು.

”ಸ್ವಾಭಿಮಾನದ ವಿಷಯ ಬಂದಾಗ, ಯಾರೋ ಬಂದು ಮಂಡ್ಯದ ಸ್ವಾಭಿಮಾನ ಕಾಪಾಡಕ್ಕೆ ಆಗಲ್ಲ. ನಮ್ ಸ್ವಾಭಿಮಾನ ನಾವೇ ಕಾಪಡಿಕೊಳ್ಳಬೇಕು. ನಾನು ಮಂಡ್ಯದವನೇ..ನಿನ್ನೆ ಮೊನ್ನೆ ಬಂದವನಲ್ಲ. ಒಬ್ರನ್ನ ಮದ್ವೆಯಾಗಿ ಮಂಡ್ಯದವನಾಗ ಬೇಕಾದ ಅವಶ್ಯಕತೆ ಇಲ್ಲ. ಮಂಡ್ಯದ ಅಳಿಯ ಅಲ್ಲ ಮಂಡ್ಯದ ಮಗ ನಾನು” ಎಂದು ‘ದೋಸ್ತಿ’ಗೆ ತಿರುಗೇಟು ನೀಡಿದ್ದಾರೆ.

Exit mobile version