Site icon PowerTV

ಬಿಜೆಪಿಯಿಂದ ಸಿಎಂ ಕುಮಾರಸ್ವಾಮಿಗೆ ಬಂದಿತ್ತಂತೆ ಬಿಗ್ ಆಫರ್..!

ಮುಖ್ಯಮಂತ್ರಿ ಹೆಚ್​.ಡಿ ಕುಮಾರಸ್ವಾಮಿ ಅವರಿಗೆ ಬಿಜೆಪಿ ಬಿಗ್ ಆಫರ್ ನೀಡಿತ್ತಂತೆ..! ಮಾಜಿ ಪ್ರಧಾನಿ ಹೆಚ್​.ಡಿ ದೇವೇಗೌಡರೇ ಇಂಥಾ ಒಂದು ಸ್ಫೋಟಕ ವಿಷಯವನ್ನು ಬಹಿರಂಗ ಪಡಿಸಿದ್ದಾರೆ.
ಎಎನ್​ಐಗೆ ನೀಡಿದ ವಿಶೇಷ ಸಂದರ್ಶನದಲ್ಲಿ ದೇವೇಗೌಡರು ಈ ಹೇಳಿಕೆಯನ್ನು ನೀಡಿದ್ದಾರೆ. ”ಮುಂಬೈನಲ್ಲಿ ಭಾರೀ ಮೊತ್ತದ ಹಣ ರೆಡಿಯಾಗಿತ್ತು. ತಮ್ಮ ಜೊತೆ ಕೈ ಜೋಡಿಸಲು ಜೆಡಿಎಸ್​​ಗೆ ಬಿಜೆಪಿ ಆಫರ್ ನೀಡಿತ್ತು. ಜೆಡಿಎಸ್​ ಸರ್ಕಾರ ರಚನೆಗೆ ಬಿಜೆಪಿ ಬೆಂಬಲ ಕೂಡ ನೀಡಿತ್ತು ” ಎಂದಿದ್ದಾರೆ.
ವಿಧಾನಸಭಾ ಚುನಾವಣಾ ವೇಳೆಯಲ್ಲಿ ಬಿಜೆಪಿ ಬಿಗ್ ಆಫರ್ ನೀಡಿತ್ತು. ಚುನಾವಣಾ ಖರ್ಚಿಗಾಗಿ ದೊಡ್ಡಮೊತ್ತದ ಹಣ ಕೊಡಲು ಬಿಜೆಪಿಯವರು ಮುಂದೆ ಬಂದಿದ್ದರಂತೆ. ಕುಮಾರಸ್ವಾಮಿ ಅವರಿಗಾಗಿ ಬಿಜೆಪಿಯವರು ಕಾಯ್ತಿದ್ರಂತೆ. ಆದರೆ, ಕುಮಾರಸ್ವಾಮಿ ಅವರು ಈ ಹಣ ನಿರಾಕರಿಸಿದ್ರಂತೆ. ಅಮಿತ್ ಶಾ ದೇವೇಗೌಡರ ಭೇಟಿಗೂ ಪ್ರಯತ್ನ ಪಟ್ಟಿದ್ರಂತೆ.
ಚುನಾವಣಾ ವೇಳೆಯಲ್ಲಿ ದೇವೇಗೌಡರು ತಮ್ಮ ಬತ್ತಳಿಕೆಯಲ್ಲಿನ ಒಂದೊಂದೇ ಅಸ್ತ್ರವನ್ನು ಪ್ರಯೋಗಿಸುತ್ತಿದ್ದಾರೆ. ಇತ್ತೀಚೆಗೆ ಮಲ್ಲಿಕಾರ್ಜುನ್ ಖರ್ಗೆ ಸಿಎಂ ಮಾಡಲು ಸೋನಿಯಾ ಗಾಂಧಿ ಒಪ್ಪಲಿಲ್ಲ ಅಂದಿದ್ರು. ಡಿಸಿಎಂ ಪರಮೇಶ್ವರ್ ಬಂದು ತುಮಕೂರಲ್ಲಿ ನಿಲ್ಲಲು ಆಹ್ವಾನಿಸಿದ್ರು ಎಂದಿದ್ರು.ಈಗ ಬಿಜೆಪಿಯ ದುಡ್ಡಿನ ಆಫರ್ ನೀಡಿತ್ತು ಎಂದು ಹೇಳಿಕೆ ನೀಡಿದ್ದಾರೆ.

Exit mobile version