Site icon PowerTV

ಮೂವರು ಸುಮಲತಾರಲ್ಲಿ ಒಬ್ಬರು ಚಾಲೆಂಜಿಂಗ್ ಸ್ಟಾರ್ ಅಭಿಮಾನಿಯ ಪತ್ನಿ..!

ಮಂಡ್ಯ : ಸುಮಲತಾ ಅಂಬರೀಶ್ ಅವರಿಗೆ ಪ್ರತಿಸ್ಪರ್ಧಿಗಳಾಗಿ ಸುಮಲತಾ ಅನ್ನೋ ಹೆಸರಿನ ಮೂವರು ನಾಮಪತ್ರ ಸಲ್ಲಿಸಿರುವ ಬಗ್ಗೆ ಈಗಾಗಲೇ ನಿಮಗೆ ಗೊತ್ತಿದೆ. ಈ ಮೂವರಲ್ಲಿ ಒಬ್ಬರು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿಮಾನಿ ಪತ್ನಿ..!
ಅಚ್ಚರಿಯಾದ್ರೂ ಇದು ಸತ್ಯ..! ಕೆ.ಆರ್ ಪೇಟೆಯ ಗೊರವಿ ಗ್ರಾಮದ ಸುಮಲತಾ ಮಂಜೇಗೌಡ, ಕನಕಪುರದ ರಂಗನಾಥ ಬಡಾವಣೆಯ ಸುಮಲತಾ ದರ್ಶನ್, ಶ್ರೀರಂಗಪಟ್ಟಣ ತಾಲೂಕಿನ ಟಿ.ಎಂ ಹೊಸರಿನ ಸುಮಲತಾ ಸಿದ್ದೇಗೌಡ ಎಂಬ ಮೂವರು ಮಹಿಳೆಯರು ನಾಮಪತ್ರ ಸಲ್ಲಿಸಿದ್ದರು. ಅವರಲ್ಲಿ ಸುಮಲತಾ ಮಂಜೇಗೌಡ ಅವರು ದರ್ಶನ್ ಅಭಿಮಾನಿಯ ಪತ್ನಿ..!
ಸ್ವತಃ ಆ ಸುಮಲತಾ ಅವರ ಪತಿ ಮಂಜೇಗೌಡರೇ ಈ ವಿಷಯವನ್ನು ಹೇಳಿದ್ದಾರೆ. ಅಷ್ಟೇ ಅಲ್ಲದೆ ನಾಮಪತ್ರ ವಾಪಸ್ಸು ಪಡೆಯುತ್ತೇನೆ ಎಂದಿದ್ದಾರೆ.
‘ಯಾರದ್ದೋ ಮಾತು ಕೇಳಿ ನನ್ನ ಪತ್ನಿ ನಾಮಪತ್ರ ಸಲ್ಲಿಸಿದ್ದಾಳೆ. ನಾನು ಅಪ್ಪಟ ದರ್ಶನ್ ಅಭಿಮಾನಿ. ನಾಳೆ ನನ್ನ ಪತ್ನಿಯೊಂದಿಗೆ ತೆರಳಿ ನಾಮಪತ್ರ ವಾಪಸ್​ ಪಡೆಯುತ್ತೇನೆ’ ಅಂತ ಮಂಜೇಗೌಡ ತಿಳಿಸಿದ್ದಾರೆ.

Exit mobile version