Site icon PowerTV

ಅಭಿಮಾನಿಗಳಿಗೆ ‘ಯಜಮಾನ’ ಟ್ವೀಟ್​​ನಲ್ಲಿ ನೀಡಿದ ಸಂದೇಶವೇನು..?

ಬೆಂಗಳೂರು: ಆಪಾದನೆಗಳ ವಿರುದ್ಧ ಯಾವುದೇ ಪೋಸ್ಟ್​ ಹಾಕಬೇಡಿ. ಅವೆಲ್ಲದಕ್ಕೂ ಕಿವಿ ಕೊಡದೆ ಶಾಂತಿ ಕಾಪಾಡಿಕೊಂಡು ಹೋಗಿ ಅಂತ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ದರ್ಶನ್ ಅವರು “ಚುನಾವಣೆ ಸಮಯದಲ್ಲಿ ಆಪಾದನೆಗಳನ್ನು ಮಾಡುವುದು ಸರ್ವೇ ಸಾಮಾನ್ಯ. ಇದಕ್ಕೆಲ್ಲ ನಾನು ಬೇಜಾರು, ಕೋಪ ಏನು ಮಾಡ್ಕೊಳಲ್ಲ. ಅಭಿಮಾನಿಗಳೂ ಅದಕ್ಕೆಲ್ಲ ಕಿವಿಕೊಡದೆ ಎಲ್ಲರೂ ಆರಾಮಾಗಿರಿ” ಅಂತ ಹೇಳಿದ್ದಾರೆ.

ಮಂಡ್ಯ ಲೋಕಸಭಾ ಕಣ ರಂಗೇರಿದೆ. ಸುಮಲತಾ ಅಂಬರೀಶ್ ಅವರ ಪರ ನಟ ದರ್ಶನ್, ಹಾಗೂ ಯಶ್​ ಅವರು ಪ್ರಚಾರದಲ್ಲಿ ತೊಡಗಿದ್ದಾರೆ. ಈ ಕುರಿತು ಮುಖ್ಯಮಂತ್ರಿ ಹೆಚ್​. ಡಿ ಕುಮಾರಸ್ವಾಮಿ ಸೇರಿದಂತೆ ಹಲವು ಜೆಡಿಎಸ್ ಮುಖಂಡರು ವಾಗ್ದಾಳಿ ನಡೆಸುತ್ತಲೇ ಇದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ನಟ ದರ್ಶನ್ ಅವರು ಇದಕ್ಕೆಲ್ಲ ಕಿವಿ ಕೊಡದೆ ಶಾಂತಿ ಕಾಪಾಡಬೇಕು ಅಂತ ಅಭಿಮಾನಿಗಳಲ್ಲಿ ಕೇಳಿಕೊಂಡಿದ್ದಾರೆ.

Exit mobile version