Site icon PowerTV

ಪ್ರಜಾಪ್ರಭುತ್ವ ಉಳಿಸುವ ಸಲುವಾಗಿ ನನ್ನ ಸ್ಪರ್ಧೆ : ವಿರೋಧಿಗಳಿಗೆ ಸುಮಲತಾ ತಿರುಗೇಟು

ಮಂಡ್ಯ : ಸ್ಟಾರ್​ವಾರ್​ಗೆ ವೇದಿಕೆ ಆಗಿರೋ ಮಂಡ್ಯ ರಣಕಣದಲ್ಲಿ ವಾಕ್ಸಮರ ಜೋರಾಗಿದೆ. ಮಾತಿಗೆ-ಮಾತು, ಏಟಿಗೆ-ತಿರುಗೇಟನ್ನು ರಣಕಲಿಗಳು ನೀಡುತ್ತಿದ್ದಾರೆ. ಇದೀಗ ಮತ್ತೆ ತನ್ನ ವಿರೋಧಿಗಳಿಗೆ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರು ಫೇಸ್​ಬುಕ್​ನಲ್ಲಿ ತಿರುಗೇಟು ಕೊಟ್ಟಿದ್ದಾರೆ.
”ನಾನು ಸೌಮ್ಯವಾಗಿ ಪ್ರೀತಿಯಿಂದ, ಭಾರತೀಯ ಪ್ರಜಾಪ್ರಭುತ್ವದ ಘನತೆಯನ್ನು ಗಾಂಭೀರ್ಯವನ್ನು ಗಮನದಲ್ಲಿಟ್ಟುಕೊಂಡು ಚುನಾವಣೆ ಎದುರಿಸುತ್ತಿದ್ದೇನೆ. ನಾನು ದಬ್ಬಾಳಿಕೆಗಳಿಗೆ ಬೆದರಿಕೆಗಳಿಗೆ ಬಗ್ಗಲ್ಲ, ಜಗ್ಗಲ್ಲ. ಪ್ರಜಾಪ್ರಭುತ್ವವನ್ನು ಉಳಿಸುವ ಸಲುವಾಗಿ, ಅತ್ಯಂತ ಉದಾತ್ತವಾದ ಆದರ್ಶಗಳನ್ನು ಮುಂದಿಟ್ಟುಕೊಂಡು ಚುನಾವಣೆಯನ್ನು ಎದುರಿಸುವ, ನಡೆಸುವ ಮನಸ್ಥಿತಿಯಿಂದ ಚುನಾವಣಾ ಕಣದಲ್ಲಿದ್ದೇನೆ. ಮಂಡ್ಯದ ನನ್ನ ಪ್ರೀತಿಯ ಜನರು ಇದನ್ನು ಸ್ವೀಕರಿಸುತ್ತಾರೆ ಅನ್ನೋ ಬಲವಾದ ನಂಬಿಕೆ ಇದೆ” ಎಂದು ಫೇಸ್​ಬುಕ್​​ನಲ್ಲಿ ಪೋಸ್ಟ್ ಮಾಡಿದ್ದಾರೆ.

Exit mobile version