Site icon PowerTV

ಸಿಎಂ ವಿರುದ್ಧ ದರ್ಶನ್​ ಫ್ಯಾನ್ಸ್ ಕೆಂಡಾಮಂಡಲ..!

ಬೆಂಗಳೂರು : ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರ ಪರ ಪ್ರಚಾರಕ್ಕೆ ಬಂದಿರುವ ನಟರಾದ ದರ್ಶನ್ ಮತ್ತು ಯಶ್ ಅವರನ್ನು ಜೆಡಿಎಸ್​ ಬೆಂಬಲಿಗರು ವಿರೋಧಿಸ್ತಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ತನ್ನ ಪುತ್ರನನ್ನೇ ಮಂಡ್ಯದಲ್ಲಿ ಕಣಕ್ಕಿಳಿಸಿರುವ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರು ಪದೇ ಪದೇ ಸುಮಲತಾ ಅವರ ವಿರುದ್ಧ ಹಾಗೂ ಅವರ ಪರ ನಿಂತಿರುವ ದರ್ಶನ್ ಮತ್ತು ಯಶ್ ವಿರುದ್ಧವೂ ಮಾತನಾಡುತ್ತಿದ್ದಾರೆ.
ಇದರಿಂದ ನಟರ ಫ್ಯಾನ್ಸ್ ಫುಲ್ ಗರಂ ಆಗಿದ್ದಾರೆ. ‘ಜೋಡೆತ್ತುಗಳಲ್ಲ ಕಳ್ಳ ಎತ್ತುಗಳು’ ಎಂಬ ಸಿಎಂ ಹೇಳಿಕೆ ಟೀಕೆಗೆ ಗುರಿಯಾಗಿದೆ. ಅಷ್ಟೇ ಅಲ್ಲದೆ ಸಿಎಂ ವಿರುದ್ಧದ ಆಕ್ರೋಶಕ್ಕೂ ಕಾರಣವಾಗಿದೆ. ದರ್ಶನ್ ಫ್ಯಾನ್ಸ್ ಅಂತೂ ಕೆಂಡಾಮಂಡಲವಾಗಿದ್ದಾರೆ. ಸಿಎಂ ಅವರ ಹೇಳಿಕೆಗೆ ಕೋಪಗೊಂಡಿರುವ ದರ್ಶನ್ ಅಭಿಮಾನಿಗಳು, ‘ಮಂಡ್ಯದಲ್ಲಿ ಮಾತ್ರವಲ್ಲ ಇಡೀ ರಾಜ್ಯದಲ್ಲಿ ಎಲ್ಲಿಯೂ ಕೂಡ ಜೆಡಿಎಸ್​ಗೆ ಮತ ಹಾಕಬಾರದು’ ಎಂದು ದರ್ಶನ್ ಫ್ಯಾನ್ಸ್ ಡಿಸೈಡ್ ಮಾಡಿದ್ದಾರೆ. ಯಾರೂ ಕೂಡ ಎಲ್ಲಿಯೂ ಜೆಡಿಎಸ್​ಗೆ ಮತ ಹಾಕ್ಬೇಡಿ ಅಂತ ಸೋಶಿಯಲ್ ಮೀಡಿಯಾದಲ್ಲಿ ಅಭಿಯಾನದ ಮೂಲಕ ಮನವಿ ಮಾಡ್ತಿದ್ದಾರೆ ಡಿ.ಬಾಸ್ ಫ್ಯಾನ್ಸ್​..!

Exit mobile version