Site icon PowerTV

ಅಭಿಮನ್ಯು ನಿಖಿಲ್​ ಜೊತೆ ಅರ್ಜುನನಂತೆ ನಾನಿದ್ದೇನೆ : ಸಿಎಂ ಕುಮಾರಸ್ವಾಮಿ

ಮಂಡ್ಯ : ಮಂಡ್ಯ ‘ಕುರುಕ್ಷೇತ್ರ’ದಲ್ಲಿ ಚಕ್ರವ್ಯೂಹ ಬೇಧಿಸಲು ನಿಖಿಲ್ ಜೊತೆ ನಾನಿದ್ದೇನೆ ಎಂದು ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ರಣಕಹಳೆ ಮೊಳಗಿಸಿದರು.
ತಮ್ಮ ಪುತ್ರ ನಿಖಿಲ್ ಕುಮಾರಸ್ವಾಮಿ ನಾಮಪತ್ರ ಸಲ್ಲಿಸಿದ ಬಳಿಕ ನಡೆದ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಸಿಎಂ, ‘ಕುರುಕ್ಷೇತ್ರ’ ದಲ್ಲಿ ನನ್ನ ಮಗ ಅಭಿಮನ್ಯು ಪಾತ್ರ ಮಾಡಿದ್ದಾರೆ. ಇತಿಹಾಸದ ರೀತಿ ಸಿನಿಮಾದಲ್ಲೂ ನನ್ನ ಮಗನಿಗೆ ಚಕ್ರವ್ಯೂಹ ಬೇಧಿಸಲು ಸಾಧ್ಯವಾಗಲ್ಲ. ಯಾಕಂದ್ರೆ ಯುದ್ಧದಲ್ಲಿ ಅಭಿಮನ್ಯು ಜೊತೆ ಅವನ ತಂದೆ ಇರ್ಲಿಲ್ಲ. ಆದ್ರೆ, ಇಲ್ಲಿ (ಮಂಡ್ಯದಲ್ಲಿ) ನನ್ನ ಮಗ ಚಕ್ರವ್ಯೂಹ ಬೇಧಿಸ್ತಾನೆ. ಇಲ್ಲಿ ಅರ್ಜುನನಂತೆ ನಾನು ಮಗನ ಪರ ಇದ್ದೀನಿ. ನನ್ನ ಮಗ ಗೆಲ್ಲೋದು ಖಚಿತ’ ಎಂದರು.
ಜಿಲ್ಲೆಯ ಜನರು ತೋರಿಸಿದ ಪ್ರೀತಿಗೆ, ನೀಡಿದ ಆಶೀರ್ವಾದ ಋಣ ತೀರಿಸಲು ನಾನು 8 ಸಾವಿರ ಕೋಟಿ ಕೊಟ್ಟಾಗ ಕುಮಾರಸ್ವಾಮಿ ಸರ್ಕಾರ ಮಂಡ್ಯ ಜಿಲ್ಲೆಯ ಸರ್ಕಾರ ಎಂದು ವ್ಯಂಗ್ಯವಾಡಿದ ಬಿಜೆಪಿಯನ್ನು ಚುನಾವಣಾ ಪ್ರಚಾರಕ್ಕೆ ಕರೆಯಲು ಸಿದ್ಧರಿದ್ದೀರಾ ಎಂದು ಜನತೆಯನ್ನು ಪ್ರಶ್ನಿಸಿದ್ರು. ಜೊತೆಗೆ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರ ವಿರುದ್ಧ ಕೂಡ ಹರಿಹಾಯ್ದರು.

Exit mobile version