Site icon PowerTV

ತುಮಕೂರಲ್ಲಿ ದೇವೇಗೌಡ್ರಿಗೆ ಮತ್ತೊಂದು ಶಾಕ್..!

ತುಮಕೂರು : ಹಾಸನವನ್ನು ಮೊಮ್ಮಗ ಪ್ರಜ್ವಲ್​ ರೇವಣ್ಣ ಅವರಿಗೆ ಬಿಟ್ಟುಕೊಟ್ಟು ತುಮಕೂರಲ್ಲಿ ಕಣಕ್ಕಿಳಿಯಲು ಮುಂದಾಗಿರುವ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ್ರಿಗೆ ಮತ್ತೊಂದು ಶಾಕ್ ಎದುರಾಗಿದೆ.
ಕಾಂಗ್ರೆಸ್​ನ ಹಾಲಿ ಸಂಸದ ಎಸ್​.ಪಿ ಮುದ್ದಹನುಮೇಗೌಡ ಅವರು ಟಿಕೆಟ್ ಕೈ ತಪ್ಪಿರುವುದಕ್ಕೆ ಅಸಮಾಧಾನ ಸ್ಫೋಟಿಸಿದ್ದಾರೆ. ಪಕ್ಷೇತರ ಅಭ್ಯರ್ಥಿಯಾಗಿ ನಾಳೆ ನಾಮಪತ್ರ ಸಲ್ಲಿಸಲು ನಿರ್ಧರಿಸಿದ್ದಾರೆ. ಎಸ್​.ಪಿ ಮುದ್ದಹನುಮೇಗೌಡರ ಸ್ಪರ್ಧೆ ದೇವೇಗೌಡರ ಗೆಲುವಿಗೆ ಅಡ್ಡಿಯಾಗುವ ಸಾಧ್ಯತೆ ಹೆಚ್ಚಿದೆ. ಇದರ ಬೆನ್ನಲ್ಲೇ ಇದೀಗ ಕಾಂಗ್ರೆಸ್​ನ ಮಾಜಿ ಶಾಸಕ ಕೆ.ಎನ್​ ರಾಜಣ್ಣ ದೊಡ್ಡಗೌಡರ ವಿರುದ್ಧ ತೊಡೆತಟ್ಟಿ ಅಖಾಡಕ್ಕಿಳಿಯಲು ನಿರ್ಧರಿಸಿದ್ದಾರೆ. ಮುದ್ದಹನುಮೇಗೌಡ ಅವರೊಡನೆ ತಾನೂ ಕೂಡ ನಾಮಪತ್ರ ಸಲ್ಲಿಕೆ ಮಾಡ್ತೀನಿ ಅಂತ ಹೇಳಿದ್ದಾರೆ. ರಾಜಣ್ಣ ಮತ್ತು ಮುದ್ದಹನುಮೇಗೌಡರು ಇಬ್ಬರೂ ದೇವೇಗೌಡರ ವಿರುದ್ಧ ಸ್ಪರ್ಧೆಗೆ ಇಳಿದರೆ ದೋಸ್ತಿಗೆ ದೊಡ್ಡ ಹೊಡೆತ ಬಿದ್ದಂತಾಗುತ್ತದೆ.
ಇಬ್ಬರ ಜಗಳ ಮೂರನೇಯವರಿಗೆ ಲಾಭ ಅನ್ನುವಂತೆ ‘ದೋಸ್ತಿ’ ಒಳ ಕಾಳಗದಿಂದ ಬಿಜೆಪಿ ಅಭ್ಯರ್ಥಿ, ಮಾಜಿ ಸಂಸದ ಜಿ.ಎಸ್​ ಬಸವರಾಜ್ ಅವರಿಗೆ ಅನುಕೂಲವಾಗಲಿದೆ. ಕಾಂಗ್ರೆಸ್​ ಮತ್ತು ಜೆಡಿಎಸ್​ನ ಮತಗಳು ಮೂರು ಪಾಲಾಗಿ ಹಂಚಿ ಹೋದಲ್ಲಿ ಜಿಎಸ್​ಬಿ 5ನೇ ಬಾರಿ ಸಂಸತ್ ಪ್ರವೇಶಿಸಲು ಸುಲಭ ದಾರಿಯಾಗುವ ಸಾಧ್ಯತೆ ಇದೆ. ಜಿ.ಎಸ್ ಬಸವರಾಜ್ ಅವರು 3 ಬಾರಿ ಕಾಂಗ್ರೆಸ್​ನಿಂದ 1 ಬಾರಿ ಬಿಜೆಪಿಯಿಂದ ಸಂಸತ್ತಿಗೆ ಆಯ್ಕೆಯಾಗಿದ್ದರು.

Exit mobile version