Site icon PowerTV

ಕೊನೇ ಕ್ಷಣದಲ್ಲಿ ನಿಖಿಲ್ ನಿರ್ಧಾರ ಬದಲು..!

ಮಂಡ್ಯ : ನಿಖಿಲ್​ ಕುಮಾರಸ್ವಾಮಿ ಅವರು ಕೊನೇ ಕ್ಷಣದಲ್ಲಿ ತಮ್ಮ ನಿರ್ಧಾರ ಬದಲಿಸಿದ್ದಾರೆ..! ಇಂದು ಅವರು ನಾಮಪತ್ರ ಸಲ್ಲಿಸಲು ನಿರ್ಧರಿಸಿದ್ದರು. ಆದರೆ, ದಿಢೀರ್ ಅಂತ ನಾಮಪತ್ರ ಸಲ್ಲಿಕೆಯನ್ನು ಮುಂದೂಡಿದ್ದಾರೆ.
ಜ್ಯೋತಿಷಿಯೊಬ್ಬರ ಮಾತಿನಂತೆ ಇಂದು ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಲು ತೀರ್ಮಾನಿಸಿದ್ದರು. ಬಳಿಕ ಮಾರ್ಚ್ 25ಕ್ಕೆ ಅದ್ಧೂರಿ ಸಮಾವೇಶ ನಡೆಸಲು ಪ್ಲಾನ್ ಮಾಡಿದ್ದರು. ಇದೀಗ ಅವರು ತಮ್ಮ ತೀರ್ಮಾನ ಬದಲಿಸಿದ್ದು, 25ರಂದೇ ನಾಮಪತ್ರ ಸಲ್ಲಿಸಿ, ರ್ಯಾಲಿ ಹಾಗೂ ಸಮಾವೇಶ ನಡೆಸಲಿದ್ದಾರೆ.
ಇನ್ನು ನಿನ್ನೆಯಷ್ಟೇ ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾ ಅಮರನಾಥ್ ಅವರು ನಾಮಪತ್ರ ಸಲ್ಲಿಸಿ ತನ್ನ ಶಕ್ತಿಪ್ರದರ್ಶನ ಮಾಡಿದ್ದರು. ಸುಮಲತಾ ಅವರಿಗೆ ನಟರಾದ ದರ್ಶನ್ ಮತ್ತು ಯಶ್ ಕೂಡ ಸಾಥ್ ನೀಡಿದ್ದರು. ಪುತ್ರ ಅಭಿಷೇಕ್, ಹಿರಿಯ ನಟ ದೊಡ್ಡಣ್ಣ, ನಿರ್ಮಾಪಕ ರಾಕ್​ಲೈನ್​ ವೆಂಕಟೇಶ್ ಉಪಸ್ಥಿತರಿದ್ರು. ಸ್ಥಳೀಯ ಕಾಂಗ್ರೆಸ್​ ಮುಖಂಡರು, ಕಾರ್ಯಕರ್ತರೂ ಪಾಲ್ಗೊಂಡು ಬೆಂಬಲ ಸೂಚಿಸಿದ್ರು.

Exit mobile version