Site icon PowerTV

ಸಿಎಂ ಎದುರು ಸುಮಲತಾ ಪರ ಘೋಷಣೆ..!

ಮಂಡ್ಯ: ಸಿಎಂ ಹೆಚ್​. ಡಿ. ಕುಮಾರಸ್ವಾಮಿ ಮುಂದೆ ಸುಮಲತಾ ಅಂಬರೀಶ್ ಪರ ಘೋಷಣೆ ಕೂಗಿರುವ ಘಟನೆ ಮೇಲುಕೋಟೆಯಲ್ಲಿ ನಡೆಸದಿದೆ. ಲೋಕಸಭಾ ಚುನಾವಣೆ ಹಿನ್ನೆಲೆ ಮೇಲುಕೋಟೆಗೆ ತೆರಳಿದ್ದ ಸಿಎಂ ಕುಮಾರಸ್ವಾಮಿಗೆ ತೀವ್ರ ಮುಖಭಂಗವಾಗಿದೆ. ಮೇಲುಕೋಟೆಗೆ ಪ್ರವೇಶಿಸುತ್ತಿದ್ದಂತೆಯೇ ಜನರು ಸುಮಲತಾ ಪರ ಘೋಷಣೆ ಕೂಗಿದ್ದು ಸಿಎಂ ಕುಮಾರಸ್ವಾಮಿಗೆ ಕಸಿವಿಸಿಯಾಗಿದೆ.  ಸಿಎಂ ಆಗಮನದ ವೇಳೆ ಸುಮಲತಾ ಪರ ಅಂಬಿ ಅಭಿಮಾನಿಗಳು ಜೈಕಾರ ಕೂಗಿದ್ದಾರೆ.

ಲೋಕಸಭಾ ಚುನಾವಣೆ ಡೇಟ್ ಫಿಕ್ಸ್​ ಆದ ಮೇಲೆ ಮಂಡ್ಯ ಚುನಾವಣಾ ಕಣ ರಂಗೇರಿದ್ದು, ಸ್ಟಾರ್​ವಾರ್​ ಮುಂದುವರಿದಿದೆ. ಮಂಡ್ಯದಿಂದ ಲೋಕಸಭಾ ಚುನಾವಣಾ ದೋಸ್ತಿ ಅಭ್ಯರ್ಥಿಯಾಗಿ ನಿಖಿಲ್ ಕುಮಾಸ್ವಾಮಿ ಸ್ಪರ್ಧಿಸುತ್ತಿದ್ದು, ಮಗನ ಗೆಲುವಿಗಾಗಿ ಸಿಎಂ ಚುನಾವಣಾ ರಣತಂತ್ರ ರೂಪಿಸಿದ್ದಾರೆ. ಸುಮಲತಾ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದು, ನಟರಾದ ಯಶ್​, ದರ್ಶನ್ ಅವರೂ ಸುಮಲತಾ ಬೆಂಬಲಿಗೆ ನಿಂತಿದ್ದಾರೆ.

Exit mobile version